ತೃಣಮೂಲ ಕಾಂಗ್ರೆಸ್ ಸಂಸದರು ಕೂಡ ಆಗಿರುವ ಬ್ಯಾನರ್ಜಿ, ಅಭೋಯ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪಕ್ಷದ ಪರವಾಗಿ ದೀಪಾರನ್ನು ಗುರುವಾರ ಸನ್ಮಾನಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಅವರು, ಜಿಮ್ನಾಸ್ಟಿಕ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಹೆಮ್ಮೆ ಪಡುವಂತೆ ಮಾಡಿದ ಅವರು ದೇಶದ ಚಿನ್ನದ ಹುಡುಗಿ. ಅವರನ್ನು ದೇಶದ "ಬ್ರ್ಯಾಂಡ್" ರಾಯಭಾರಿಯನ್ನಾಗಿ ನೇಮಿಸಬೇಕು. ಈ ವಿಷಯವನ್ನು ನಾನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ.