ಭಾರತದಾದ್ಯಂತ ಪ್ರುಡುನೋವಾ ಪ್ರಸಿದ್ಧಿಗೊಳಿಸಲು ದೀಪಾ ಕರ್ಮಾಕರ್ ಬಯಕೆ

ಶುಕ್ರವಾರ, 5 ಆಗಸ್ಟ್ 2016 (13:46 IST)
ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಒಲಿಂಪಿಕ್‌ನಲ್ಲಿ ಪ್ರುಡುನೋವಾ ಜಿಗಿತ ಮಾಡಲಿದ್ದು, ಭಾನುವಾರ ಮಹಿಳಾ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.
 
ಮಹಿಳಾ ಜಿಮ್ನಾಸ್ಟಿಕ್ಸ್‌ನಲ್ಲಿ ಅತ್ಯಂತ ಕಷ್ಟ ಮತ್ತು ಅಪಾಯಕಾರಿ ಎಂದು ಪರಿಗಣಿಸಲಾದ ಪ್ರುಡುನೋವಾದಲ್ಲಿ ದೀಪಾ ಪದಕ ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅಭ್ಯಾಸವು ಪರಿಪೂರ್ಣಗೊಳಿಸುತ್ತದೆಂದು ನಾನು ನಂಬುವುದರಿಂದ ಅದು ಹೆಚ್ಚು ಕಷ್ಟವಾಗುವುದಿಲ್ಲ ಎಂದು ಒಲಿಂಪಿಕ್ ಪಾರ್ಕ್‌ನಲ್ಲಿ ಅವರು ಗುರುವಾರ ಹೇಳಿದರು. ನನ್ನ ಕೋಚ್ ನಾನು ವ್ಯಾಪಕ ಅಭ್ಯಾಸ ಮಾಡುವುದನ್ನು ಖಾತರಿ ಮಾಡಿಕೊಂಡಿದ್ದು, ಇದರಿಂದ ನನಗೆ ಪ್ರುಡುನೋವಾ ಪ್ರದರ್ಶನ ಕಷ್ಟವಾಗುವುದಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದರು.
 
ತನ್ನ ತರಬೇತಿಯ ಪ್ರಮಾಣವನ್ನು ಅವರು ತಿಳಿಸಿ ಕಳೆದ ಮೂರು ತಿಂಗಳಲ್ಲಿ ತಾನು 1000 ಬಾರಿ ಪ್ರುಡುನೋವಾ ಪುನರಾವರ್ತಿಸಿದ್ದು, ಈಗ ಸುಲಭವಾದ ಜಿಗಿತವಾಗಿದೆ ಎಂದರು. ಇತ್ತೀಚಿನವರೆಗೆ ಪ್ರುಡುನೋವಾ ಕುರಿತು ಅನೇಕ ಮಂದಿಗೆ ತಿಳಿದಿರಲಿಲ್ಲ.ಆದರೆ ಈ ಜಿಗಿತವು ಈಗ ನನಗಿಂತ ಭಾರತದಲ್ಲಿ ಪ್ರಖ್ಯಾತವಾಗಿದೆ ಎಂದು ಉದ್ಗರಿಸಿದರು.
 
 ರಿಯೋದಲ್ಲಿ ತಮಗೆ ಯಾವುದೇ ಒತ್ತಡ ಉಂಟಾಗುವುದಿಲ್ಲ. ನಾನು ಕಲಿತಿದ್ದನ್ನು , ಅಭ್ಯಾಸ ಮಾಡಿದ್ದನ್ನು ಅಲ್ಲಿ ಮಾಡುವುದರಿಂದ ಶ್ರೇಷ್ಟ ಪ್ರದರ್ಶನ ನೀಡುವ ಭರವಸೆ ಹೊಂದಿರುವುದಾಗಿ ದೀಪಾ ತಿಳಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ