ದೀಪಾ ಕರ್ಮಾಕರ್ ಪ್ರುಡುನೋವಾ ಮಹತ್ವಾಕಾಂಕ್ಷೆಗೆ ನೆರವಾಗಿದ್ದು ಡಿಐವೈ ಉಪಕರಣ

ಶುಕ್ರವಾರ, 22 ಜುಲೈ 2016 (14:00 IST)
ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಪ್ರುಡುನೋವಾ ವಾಲ್ಟ್ ಕಸರತ್ತು ಆರಂಭಿಸುವ ಮುಂಚೆ, ಕೇವಲ  ಸ್ಕೂಟರ್‌ನ ಸೆಕೆಂಡ್ ಹ್ಯಾಂಡ್ ಭಾಗಗಳಿಂದ ತಯಾರಿಸಿದ ಡಿಐವೈ ಉಪಕರಣದ ನೆರವಿನಿಂದ ದೀಪಾ ಕೌಶಲ್ಯ ವೃದ್ಧಿಗೆ ಅಡಿಪಾಯ ಹಾಕಿದ್ದು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಗೊತ್ತಿದೆ. ನಮ್ಮ ಬಳಿ ಆರಂಭದಲ್ಲಿ ಉಪಕರಣ ಇಲ್ಲದಿದ್ದರಿಂದ ನಾವು ಕಲ್ಪನೆಯನ್ನು ಬಳಸಿ ತಯಾರಿಸಿದೆವು ಎಂದು ಕರ್ಮಾಕರ್ ಕೋಚ್ ಬಿಶ್ವೇಶ್ವರ್ ನಂದಿ ರಾಯ್ಟರ್ಸ್‌ಗೆ ತಿಳಿಸಿದರು.
 
 ನಾವು ಸುಮಾರು 8ರಿಂದ 10 ಕ್ರ್ಯಾಶ್ ಮ್ಯಾಟ್‌ಗಳನ್ನು ಒಂದರ ಮೇಲೊಂದು ಜೋಡಿಸಿ ವಾಲ್ಟಿಂಗ್ ವೇದಿಕೆಯನ್ನು ನಿರ್ಮಿಸಿದೆವು. ಸ್ಕೂಟರ್‌ಗಳ ಸೆಕೆಂಡ್ ಹ್ಯಾಡ್ ಸ್ಪ್ರಿಂಗ್ ಮತ್ತು ಶಾಕ್ ಅಬ್‌ಸಾರ್ಬರ್‌ಗಳನ್ನು ಖರೀದಿಸಿ ಸ್ಥಳೀಯ ಬಡಗಿ ಅದರಿಂದ ಸ್ಪ್ರಿಂಗ್ ಬೋರ್ಡ್ ತಯಾರಿಸಿದ.

ದೀಪಾ ವಾಲ್ಟ್ ಜಿಗಿತ ಅಭ್ಯಾಸ ಮಾಡುವಾಗ ಅವರು ಈ ಕ್ರ್ಯಾಶ್ ಮ್ಯಾಟ್‌ಗಳ ಮೇಲೆ ಜಿಗಿಯುತ್ತಿದ್ದರು ಎಂದು ಹೇಳಿದ್ದಾರೆ.  ಆಗಸ್ಟ್‌ನಲ್ಲಿ ದೀಪಾ ದಿಟ್ಟೆದೆಯ ಪ್ರುಡುನೋವಾ ವಾಲ್ಟ್ ಪ್ರದರ್ಶಿಸುವ ಮುಂಚೆ ಜಗತ್ತಿಗೆ ತಾವು ಯಾವ ಮಟ್ಟಕ್ಕೆ ಮುಟ್ಟಿದ್ದೇನೆಂದು ತೋರಿಸುವ ಅವಕಾಶ ಸಿಗಲಿದೆ. ಪ್ರುಡುನೋವಾ ಕೌಶಲ್ಯ ಅತ್ಯಂತ ಕಷ್ಟಕರವಾಗಿದ್ದು, ಈ ಸಾಧನೆ ಮಾಡಿದ ಐವರು ಮಹಿಳೆಯರ ಪೈಕಿ ದೀಪಾ ಒಬ್ಬರಾಗಿದ್ದಾರೆ.
 
 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕರ್ಮಾಕರ್ ಕಂಚಿನ ಪದಕ ವಿಜೇತರಾಗಿದ್ದಾರೆ.  ದೀಪಾ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿದ್ದು, ದೀಪಾ ಭಾರತಕ್ಕೆ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ. ದೃಢಸಂಕಲ್ಪದಿಂದ ಅವರು ಈ ಸಾಧನೆ ಮಾಡಿದ್ದು, ಸಂಪನ್ಮೂಲಗಳ ಕೊರತೆ ಅವರಿಗೆ ಅಡ್ಡಿಯಾಗಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ