ವಿಂಬಲ್ಡನ್ ಗೆ ಜೊಕೋವಿಕ್ ದೊರೆ

ಸೋಮವಾರ, 12 ಜುಲೈ 2021 (09:56 IST)
ಲಂಡನ್: ವಿಂಬಲ್ಡನ್ ಟೆನಿಸ್ ಪುರುಷರ ವಿಭಾಗದಲ್ಲಿ ಸರ್ಬಿಯಾದ ಖ್ಯಾತ ಟೆನಿಸಿಗ ನೊವಾಕ್ ಜೊಕೋವಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
Photo Courtesy: Google


ಈ ಮೂಲಕ ಅವರು ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಕಳೆದ ಮೂರೂ ವರ್ಷಗಳಿಂದ ಸತತವಾಗಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ನಿನ್ನೆಯ ಫೈನಲ್ಸ್ ಪಂದ್ಯದಲ್ಲಿ ಇಟೆಲಿಯ ಮ್ಯಾಟೊ ಬೆರಟನಿ ವಿರುದ್ಧ 6-7(4-7), 6-4, 6-4,6-3 ಅಂತರದಿಂದ ಗೆದ್ದು ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅತ್ಯಧಿಕ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್ ಮತ್ತು ರಾಫೇಲ್ ನಡಾಲ್ ರೊಂದಿಗೆ ಗೌರವ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ