ಮ್ಯಾಡ್ರಿಕ್ ಏಕೈಕ ಗೋಲಿನಿಂದ ಟರ್ಕಿ ವಿರುದ್ಧ ಕ್ರೊಯೇಷಿಯಾಗೆ ಜಯ

ಸೋಮವಾರ, 13 ಜೂನ್ 2016 (17:24 IST)
ಪ್ಯಾರಿಸ್: ರಿಯಲ್ ಮ್ಯಾಡ್ರಿಡ್ ಮಿಡ್ ಫೀಲ್ಡರ್ ಲ್ಯೂಕಾ ಮಾಡ್ರಿಕ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಯೂರೊ 2016ರ ಗ್ರೂಪ್ ಡಿ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವು ಟರ್ಕಿಯನ್ನು 1-0 ಗೋಲಿನಿಂದ ಭಾನುವಾರ ಸೋಲಿಸಿದೆ.

ಕ್ರೊಯೇಷಿಯಾ ಆಟದುದ್ದಕ್ಕೂ ಮೇಲುಗೈ ಸಾಧಿಸಿ ಉತ್ತರಾರ್ಧದಲ್ಲಿ ಎರಡು ಬಾರಿ ಚೆಂಡು ಗೋಲಿನ ಕಂಬಕ್ಕೆ ಬಡಿದು ಗೋಲಾಗುವುದು ತಪ್ಪಿತು.

ಆದರೆ 41ನೇ ನಿಮಿಷದಲ್ಲಿ ಮಾಡ್ರಿಕ್ ಬಿರುಸಿನ ಗೋಲನ್ನು ಬಾರಿಸಿ ತಮ್ಮ 11ನೇ ಅಂತಾರಾಷ್ಟ್ರೀಯ ಗೋಲನ್ನು ಗಳಿಸಿದರು. 
 ಈ ಜಯದಿಂದ ಯೂರೋ 2008ರ ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿಗಳ ಮೂಲಕ ತಮ್ಮ ವಿರುದ್ಧ ಟರ್ಕಿ ಜಯಗಳಿಸಿದ ಸೇಡನ್ನು ಕ್ರೊಯೇಷಿಯಾ ತೀರಿಸಿಕೊಂಡಿತು.  ಕ್ರೊಯೇಷಿಯಾ ತನ್ನ ಮುಂದಿನ ಪಂದ್ಯವನ್ನು ಜೆಕ್ ರಿಪಬ್ಲಿಕ್ ವಿರುದ್ಧ ಆಡಲಿದ್ದು, ಕೊನೆಯ 16ರ ಮೇಲೆ ಕಣ್ಣಿರಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ