ಯೂರೋ 2106: ಉಕ್ರೇನ್ ವಿರುದ್ಧ 2-0ಯಿಂದ ಜಯಗಳಿಸಿದ ಜರ್ಮನಿ

ಸೋಮವಾರ, 13 ಜೂನ್ 2016 (17:03 IST)
ಲಿಲ್ಲೀ: ಜರ್ಮನಿ ನಾಯಕ ಬ್ಯಾಸ್ಟಿಯನ್ ಸ್ಕೆವೈನ್‌ಸ್ಟೈಗರ್ ಐದು ವರ್ಷಗಳಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ದಾಖಲಿಸಿ ಉಕ್ರೇನ್ ವಿರುದ್ಧ 2-0ಯಿಂದ ಜಯಗಳಿಸುವ ಮೂಲಕ  ಜರ್ಮನಿಯ ಯೂರೊ 2016ರ ಅಭಿಯಾನಕ್ಕೆ ಪರಿಪೂರ್ಣ ಆರಂಭ ಒದಗಿಸಿದ್ದಾರೆ.  

ಭಾನುವಾರ ಆಟ ಆರಂಭವಾದ 19ನೇ ನಿಮಿಷದಲ್ಲಿ ವ್ಯಾಲೆನ್ಸಿಯ ಡಿಫೆಂಡರ್ ಶ್ಕೋಡ್ರಾನ್ ಮುಸ್ತಾಫಿ ಟೋನಿ ಕ್ರೂಸ್ ಫ್ರೀ ಕಿಕ್‌ನಿಂದ ಗೋಲು ಪಟ್ಟಿಯೊಳಗೆ ಹೊಡೆದರು. ಯೆವನ್ ಕಚಾರೆಡಿಯ ಬಾರಿಸಿದ ಚೆಂಡನ್ನು ಜರ್ಮನಿ ಗೋಲುರಕ್ಷಕ ಮ್ಯಾನ್ಯೂಲ್ ನ್ಯುಯರ್ ತಡೆದು ಗೋಲಾಗುವುದನ್ನು ತಪ್ಪಿಸಿದರು.

ಆದಾಗ್ಯೂ ಸ್ಕೈವೈನ್ ಸ್ಟೈಗರ್ ಗಾಯದಿಂದ ಚೇತರಿಸಿಕೊಂಡು ಆಡಲಿಳಿದಿದ್ದು, ಇನ್ನೊಂದು ಗೋಲನ್ನು ಗೋಲುಪೆಟ್ಟಿಗೆಯೊಳಗೆ ಬಾರಿಸಿದ್ದರಿಂದ ಜರ್ಮನಿ 2-0ಯಿಂದ ಮುನ್ನಡೆ ಸಾಧಿಸಿತು. 
 
 ಜರ್ಮನಿ ಮುಂದಿನ ಪಂದ್ಯವನ್ನು ಪೋಲೆಂಡ್ ವಿರುದ್ಧ ಪ್ಯಾರಿಸ್‌ನಲ್ಲಿ ಆಡುವ ಮೂಲಕ ಗ್ರೂಪ್ ಸಿನಲ್ಲಿ ಟಾಪ್ ಸ್ಥಾನದ ಮೇಲೆ ಕಣ್ಣಿರಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ