ರಷ್ಯಾದ 200 ಅಭಿಮಾನಿಗಳು ಸಾವಿರಾರು ಇಂಗ್ಲಿಷರನ್ನು ಥಳಿಸಿದ್ದು ಹೇಗೆ: ಪುಟಿನ್ ಪ್ರಶ್ನೆ

ಶನಿವಾರ, 18 ಜೂನ್ 2016 (15:40 IST)
ಯೂರೊ 2016ರಲ್ಲಿ ಫುಟ್ಬಾಲ್ ಹಿಂಸಾಚಾರದ ಘಟನೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವಮಾನಕರ ಎಂದು ಕರೆದಿದ್ದಾರೆ. ಆದರೆ ಅದೇ ಗಳಿಗೆಯಲ್ಲಿ ರಷ್ಯಾ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್ ಬೆಂಬಲಿಗರ ಮೇಲೆ ಹೇಗೆ ಮೇಲುಗೈ ಸಾಧಿಸಿದರು ಎಂದು ಪ್ರಶ್ನಿಸಿದ್ದಾರೆ.
 
ಸೇಂಟ್ ಪೀಟರ್‌ಬರ್ಗ್ ವಾರ್ಷಿಕ ಆರ್ಥಿಕ ವೇದಿಕೆಯಲ್ಲಿ ಮಾತನಾಡುತ್ತಿದ್ದ ಅವರು ನಮ್ಮ 200 ಮಂದಿ ಅಭಿಮಾನಿಗಳು ಸಾವಿರಾರು ಜನ ಇಂಗ್ಲೀಷ್ ಅಭಿಮಾನಿಗಳನ್ನು ಥಳಿಸಿದ್ದು ಹೇಗೆ ಎಂದು ಪ್ರೇಕ್ಷಕರ ನಗೆ ಮತ್ತು ಕರತಾಡನದ ನಡುವೆ ಹೇಳಿದರು. ಏನೇ ಆದರೂ ಕಾನೂನು ಜಾರಿ ಹಿಂಸಾತ್ಮಕವಾಗಿ ವರ್ತಿಸಿದ ಎಲ್ಲರಿಗೂ ಸಮಾನ ಶಿಕ್ಷೆ ನೀಡಬೇಕು ಎಂದು ಪ್ರತಿಪಾದಿಸಿದರು. 
ಅವರ ನಡುವೆ ನಿಜವಾಗಲೂ ಕ್ರೀಡೆಯನ್ನು ಆನಂದಿಸುವ ಶಾಂತ ಸ್ವಭಾವದ ಜನರು ಯಾವುದೇ ಉಲ್ಲಂಘನೆಯು ತಮ್ಮ ನೆಚ್ಚಿನ ತಂಡಕ್ಕೆ ಪೂರಕವಾಗಿಲ್ಲ ಮತ್ತು ತಂಡ ಹಾಗೂ ಕ್ರೀಡೆಗೆ ಹಾನಿಕರ ಎಂದು ಭಾವಿಸುವುದಾಗಿ ಅವರು ಹೇಳಿದರು. 
 
ಮಾರ್ಸಿಲೆಯಲ್ಲಿ ಇಂಗ್ಲೆಂಡ್ ವಿರುದ್ಧ ರಷ್ಯಾದ ಆರಂಭಿಕ ಪಂದ್ಯದಲ್ಲಿ ಉಂಟಾದ ಘರ್ಷಣೆಯಲ್ಲಿ ರಷ್ಯಾ ಫುಟ್ಬಾಲ್ ಅಭಿಮಾನಿಗಳ ಪುಂಡಾಟಿಕೆಯಿಂದ ಕೆಟ್ಟ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. 
 
ಫ್ರೆಂಚ್ ಕೋರ್ಟ್ ರಷ್ಯಾದ ಮೂವರು ಅಭಿಮಾನಿಗಳಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಶನಿವಾರ ಇನ್ನೂ 20 ಜನರನ್ನು ಉಚ್ಚಾಟಿಸಲಾಗುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ