ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಶೂಟರ್ ಗಗನ್ ನಾರಂಗ್

ಬುಧವಾರ, 7 ಏಪ್ರಿಲ್ 2021 (08:51 IST)
ನವದೆಹಲಿ: ದೇಶದ ಖ್ಯಾತ ಶೂಟರ್ ಗಳಾದ ಗಗನ್ ನಾರಂಗ್-ಅನು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.

 

ಲಂಡನ್ ಒಲಿಂಪಿಕ್ಸ್ ಪದಕ ವಿಜೇತ ನಾರಂಗ್ ಕಾಮನ್ ವೆಲ್ತ್ ಗೇಮ್ಸ್ ಬಂಗಾರ ವಿಜೇತೆ ಅನು ರಾಜ್ ಸಿಂಗ್ ಸದ್ಯದಲ್ಲೇ ವಿವಾಹವಾಗಲಿದ್ದಾರೆ. ಇಬ್ಬರೂ ಒಂದೇ ಕ್ರೀಡೆಯಲ್ಲಿ ಖ್ಯಾತಿ ಗಳಿಸಿದವರಾಗಿದ್ದರಿಂದ ಇಬ್ಬರೂ ಪರಸ್ಪರರ ವೃತ್ತಿ ಬದುಕನ್ನು ಅರಿತುಕೊಂಡಿದ್ದೇವೆ. ಹೀಗಾಗಿ ನಮ್ಮ ಜೀವನ ಚೆನ್ನಾಗಿರಲಿ ಎಂಬುದು ನಾರಂಗ್ ವಿಶ್ವಾಸ.

ಈ ತಿಂಗಳ ಕೊನೆಯಲ್ಲಿ ಹೈದರಾಬಾದ್ ನಲ್ಲಿ ಇಬ್ಬರ ಮದುವೆ ಕಾರ್ಯಕ್ರಮ ನಡೆಯುವ ಸಾಧ‍್ಯತೆಯಿದೆ. ಇಬ್ಬರ ಕುಟುಂಬದಲ್ಲೂ ಇವರ ವಿವಾಹಕ್ಕೆ ಸಮ್ಮತಿ ದೊರೆತಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ