ಪ್ಯಾರಿಸ್‌ನಲ್ಲಿ ಲಯ ತಪ್ಪಿದ ಚೋ‍ಪ್ರಾಗೆ ಕೈಜಾರಿದ ಚಿನ್ನ: ಭಾರತದ ಜಾವೆಲಿನ್‌ ತಾರೆಗೆ ಬೆಳ್ಳಿ ಕಿರೀಟ

Sampriya

ಶುಕ್ರವಾರ, 9 ಆಗಸ್ಟ್ 2024 (02:55 IST)
Photo Courtesy X
ಪ್ಯಾರಿಸ್ : ಭಾರತದ ಜಾವೆಲಿನ್‌ ಥ್ರೋ ತಾರೆ ನೀರಜ್ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಪ್ಯಾರಿಸ್‌ನಲ್ಲಿ ಭಾರತ ಚಿನ್ನದ ನಿರೀಕ್ಷೆ ಕಮರಿದೆ.

ಎರಡನೇ ಪ್ರಯತ್ನದಲ್ಲಿ 89.45 ಮೀಟರ್ಸ್ ದೂರ ಜಾವೆಲಿನ್ ಥ್ರೋ ಮಾಡಿದರು.  ಇದು ಅವರ ವೈಯಕ್ತಿಕ ಶ್ರೇಷ್ಠ ಎರಡನೇ ಪ್ರಯತ್ನವಾಗಿದೆ. ಪಾಕಿಸ್ತಾನ ಅರ್ಷದ್ ನದೀಂ 92.97 ಮೀ ದೂರ ಎಸೆದು ಚಿನ್ನದ ಪದಕ ಜಯಿಸಿದರು.  ಗ್ರೆನೆಡಾದ ಆ್ಯಂಡರ್ಸನ್ ಪೀಟರ್ 88.54 ಮೀಟರ್ಸ್ ದೂರ ಥ್ರೋ  ಮಾಡಿ ಕಂಚು ಗಳಿಸಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇದು  ಐದನೇ ಪದಕ. ಮೊದಲ ಬೆಳ್ಳಿ ಪದಕ ಇದಾಗಿದೆ. ಉಳಿದ ನಾಲ್ಕು ಕಂಚಿನ ಪದಕಗಳಾಗಿವೆ. ಚಿನ್ನದ ಭರವಸೆ ಮೂಡಿಸಿದ್ದ ನೀರಜ್‌ ಬೆಳ್ಳಿಗೆ ತೃಪ್ತಿಪಟ್ಟರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಇಲ್ಲಿಯೂ ಅದೇ ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದರು. ಆದರೆ, ಅದು ಕೈಗೂಡಲಿಲ್ಲ. ಆರು ಪ್ರಯತ್ನಗಳಲ್ಲಿ ಅವರು ಐದರಲ್ಲಿ ಫೌಲ್ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ