ದೀಪಾ ಕರ್ಮಾಕರ್ ಮನೆ ಮುಂದೆ ರಸ್ತೆ ರಿಪೇರಿ ಮಾಡಲಿರುವ ಸರ್ಕಾರ

ಬುಧವಾರ, 19 ಅಕ್ಟೋಬರ್ 2016 (13:43 IST)
ಅಗರ್ತಲಾ: ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ತಮಗೆ ಉಡುಗೊರೆಯಾಗಿ ಸಿಕ್ಕಿದ ಬಿಎಂಡಬ್ಲ್ಯು ಕಾರನ್ನು ತಿರಸ್ಕರಿಸಿದ್ದು ಅವರಿಗೆ ಒಳ್ಳೆಯದೇ ಮಾಡಿದೆ. ಹೇಗೆ ಅಂತೀರಾ?

ತಮ್ಮ ಮನೆ ಹತ್ತಿರದ ರಸ್ತೆ ಸರಿ ಇಲ್ಲ. ಹೀಗಾಗಿ ಐಷಾರಾಮಿ ಕಾರು ತನಗೆ ಬಳಸಲು ಸಾಧ್ಯವಿಲ್ಲ ಎಂದು ದೀಪಾ ಹೇಳಿದ್ದರು. ಹೀಗಾಗಿ ತ್ರಿಪುರಾ ಸರ್ಕಾರ ಅವರ ಮನೆ ಬಳಿಯ ರಸ್ತೆ ಅಗಲಗೊಳಿಸಲು ಮುಂದಾಗಿದೆ.

ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ಮಾಡಿದ ಸಾಕ್ಷಿ ಮಲಿಕ್, ಪಿ.ವಿ. ಸಿಂಧು ಹಾಗೂ ದೀಪಾಗೆ ಹೈದರಾಬಾದ್ ಬಾಡ್ಮಿಂಟನ್ ಅಸೋಸಿಯೇಷನ್ ಬಿಎಂಡಬ್ಲ್ಯು ಕಾರು ಉಡುಗೊರೆಯಾಗಿ ನೀಡಿತ್ತು. ಇದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕ್ರೀಡಾಳುಗಳಿಗೆ ಹಸ್ತಾಂತರಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ