ಭಾರತೀಯ ಬ್ಯಾಡ್ಮಿಂಟನ್ ತಾರೆಯರು 73 ವರ್ಷಗಳಲ್ಲಿ ಇದೇ ಮೊದಲ ಬಾರಿ ಥಾಮಸ್ ಕಪ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ನಿರ್ಮಿಸಿದೆ.
ಥಾಯ್ಲೆಂಡ್ ನಲ್ಲಿ ಭಾನುವಾರ ಫೈನಲ್ ನಲ್ಲಿ ಭಾರತ 3-0 ಅಂತರದಿಂದ ಇಂಡೋನೇಷ್ಯಾ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಭಾರತ ತಂಡದ ಪರ ಕಡಂಬಿ ಶ್ರೀಕಾಂತ್, ಸ್ವಸ್ತಿಕ್ ರಾಜ್-ರಂಕಿರೆಡ್ಡಿ ಜೋಡಿ ಹಾಗೂ ಲಕ್ಷ್ಯ ಸೇನ್ ರೋಚಕ ಜಯ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ನೊಂದಿಗೆ ಪ್ರಶಸ್ತಿ ಗೆದ್ದು ಇತಿಹಾಸ ಬರೆದರು.