ಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಾರೆಯರು: ಪ್ರಧಾನಿ ಮೋದಿ ಅಭಿನಂದನೆ
ಭಾನುವಾರ, 15 ಮೇ 2022 (16:34 IST)
ನವದೆಹಲಿ: ಬ್ಯಾಂಕಾಕ್ ನಲ್ಲಿ ನಡೆದ ಥಾಮಸ್ ಕಪ್ ಫೈನಲ್ ನಲ್ಲಿ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಾರೆಯರ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಗೆ ಸ್ವತಃ ಪ್ರಧಾನಿ ಮೋದಿ ಭಾರತೀಯ ತಾರೆಯರನ್ನು ಅಭಿನಂದಿಸಿದ್ದಾರೆ.
ಫೈನಲ್ ನಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಭಾರತೀಯರು ಈ ಮೂಲಕ ಥಾಮಸ್ ಕಪ್ ಗೆದ್ದ 6 ನೇ ರಾಷ್ಟ್ರ ಎಂಬ ಐತಿಹಾಸಿಕ ಸಾಧನೆ ಮಾಡಿದೆ. ಇದಕ್ಕೂ ಮೊದಲು ಚೀನಾ, ಡೆನ್ಮಾರ್ಕ್, ಇಂಡೋನೇಷ್ಯಾ, ಜಪಾನ್ ಈ ಸಾಧನೆ ಮಾಡಿತ್ತು.
ಈ ಸಾಧನೆ ಬಗ್ಗೆ ಭಾರತೀಯ ಕೋಚ್ ಪುಲ್ಲೇಲ ಗೋಪಿಚಂದ್ ಹರ್ಷ ವ್ಯಕ್ತಪಡಿಸಿದ್ದು, ಇದು 1983 ರ ವಿಶ್ವಕಪ್ ಕ್ರಿಕೆಟ್ ಗೆಲುವಿಗಿಂತ ಕಡಿಮೆಯೇನಲ್ಲ ಎಂದಿದ್ದಾರೆ. ಭಾರತದ ಪರ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ಎದುರಾಳಿಗಳ ವಿರುದ್ಧ ಹೋರಾಟ ನಡೆಸಿದ್ದರು. ಟೂರ್ನಿಯ 73 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಭಾರತ ಫೈನಲ್ ತಲುಪಿರಲಿಲ್ಲ. ಆದರೆ ಈ ಬಾರಿ ಐತಿಹಾಸಿಕ ಸಾಧನೆ ಮಾಡಿದೆ.