ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ : ಭವಿಷ್ಯ ನುಡಿಯಲು ಸಾನಿಯಾ ನಿರಾಕರಣೆ

ಸೋಮವಾರ, 18 ಜುಲೈ 2016 (18:01 IST)
ಮುಂದಿನ ತಿಂಗಳಲ್ಲಿ ನಡೆಯುವ ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಬಗ್ಗೆ ಯಾವುದೇ ಭವಿಷ್ಯ ನುಡಿಯಲು ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ನಿರಾಕರಿಸಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಪ್ರಾರ್ಥನಾ ತೊಂಬಾರೆ ಜತೆ ಆಡಲಿದ್ದು, ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಅವರ ಜತೆಗೂಡಿದ್ದಾರೆ. ಪ್ರತಿಯೊಂದು ಟೂರ್ನಿಗೆ ತಾವು ಸಿದ್ಧತೆ ಮಾಡಿಕೊಳ್ಳುವ ರೀತಿಯಲ್ಲಿ ಒಲಿಂಪಿಕ್ಸ್‌ಗೆ ಕೂಡ ಸಿದ್ಧತೆ ಮಾಡಿಕೊಳ್ಳುವುದಾಗಿ ಸಾನಿಯಾ ತಿಳಿಸಿದರು.
 
ನಾವು ಪ್ರತಿಯೊಂದು ಟೂರ್ನಿಯಲ್ಲೂ ಶ್ರೇಷ್ಟ ಪ್ರದರ್ಶನ ನೀಡಲು ಯತ್ನಿಸಿ ಪದಕದೊಂದಿಗೆ ಹಿಂತಿರುಗಲು ಆಶಿಸುತ್ತೇವೆ. ಆದರೆ ಪದಕ ಸಿಗದಿದ್ದರೆ ಪುನಃ ಪ್ರಯತ್ನಿಸುತ್ತೇವೆ. ಆದರೆ ಏನಾಗುತ್ತದೆಂದು ಮುನ್ಸೂಚನೆಯನ್ನು ನಾವು ನೀಡಲಾಗುವುದಿಲ್ಲ ಎಂದು  ಸಂವಾದವೊಂದರಲ್ಲಿ ರಿಯೊದ ಪದಕ ಗೆಲ್ಲುವ ಅವಕಾಶಗಳನ್ನು ಕುರಿತು ಕೇಳಿದಾಗ ಅವರು ಹೇಳಿದರು.
 
ಸಾನಿಯಾ ಅವರ ಆತ್ಮಚರಿತ್ರೆ ''ಏಸ್ ಎಗೇನಸ್ಟ್  ಆಡ್ಸ್'' ಕೃತಿಯನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿನ್ನೆ ರಾತ್ರಿ ಬಿಡುಗಡೆ ಮಾಡಿದ್ದರು. ಬೋಪಣ್ಣ ಜತೆ ಅವರ  ಹೊಂದಾಣಿಕೆ ಕುರಿತು ಕೇಳಿದಾಗ ನಾನು ಮತ್ತು ರೋಹನ್ ಸುದೀರ್ಘ ಕಾಲ ಪರಿಚಯವಿದ್ದು ಅನೇಕ ಬಾರಿ ಒಟ್ಟಿಗೆ ಆಡಿದ್ದೇವೆ. ಆದ್ದರಿಂದ ಒಲಿಂಪಿಕ್ಸ್‌ನಲ್ಲಿ ಒಟ್ಟಾಗಿ ಆಡಲು ಎದುರುನೋಡುತ್ತಿದ್ದೇವೆ ಎಂದು ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ