ಪಾಕಿಸ್ತಾನದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ದೂರು ನೀಡಿದ ಭಾರತ?

ಶುಕ್ರವಾರ, 7 ಜುಲೈ 2017 (11:05 IST)
ನವದೆಹಲಿ: ಲಂಡನ್ ನಲ್ಲಿ ನಡೆದ ವಿಶ್ವ ಹಾಕಿ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ  ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಗೆ ಮ್ಯಾಚ್ ಫಿಕ್ಸಿಂಗ್ ದೂರು ನೀಡಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.


ಭಾರತ ಮತ್ತು ಪಾಕಿಸ್ತಾನ ನಡುವೆ ಲಂಡನ್ ನಲ್ಲಿ ಜೂನ್ 18 ರಂದು ನಡೆದ ಪಂದ್ಯದಲ್ಲಿ ಭಾರತ 7-1 ಗೋಲುಗಳ ಅಂತರದಿಂದ ಭರ್ಜರಿಯಾಗಿ ಗೆಲುವು  ಕಂಡಿತ್ತು. ಈ ಪಂದ್ಯವನ್ನು ಪಾಕ್ ಫಿಕ್ಸಿಂಗ್ ನಡೆಸಿತ್ತು ಎಂದು ಭಾರತ ಆರೋಪಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಗೆ ದೂರನ್ನೂ ನೀಡಲಾಗಿದೆ ಎನ್ನಲಾಗಿದೆ. ಈ ಮಹತ್ವದ ಪಂದ್ಯಕ್ಕೆ ಮೊದಲು ಭಾರತದ ಆಟಗಾರ ಸರ್ದಾರ್ ಸಿಂಗ್ ರನ್ನು ಲೈಂಗಿಕ ಕಿರುಕುಳ ಆರೋಪದಲ್ಲಿ ವಿಚಾರಣೆಗೆ ಕರೆದಿರುವುದು ಮ್ಯಾಚ್ ಫಿಕ್ಸಿಂಗ್ ನಡೆಸಲು ನಡೆದ ಪ್ರಯತ್ನ ಎಂದು ಹಾಕಿ ಇಂಡಿಯಾ ದೂರಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ.. ಬುರ್ಖಾ ಹಾಕಿ ತಲೆಮರೆಸಿಕೊಂಡು ಬಂದ ರಾಖಿ ಸಾವಂತ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ