ತವರಿಗೆ ಬಂದ ಮೀರಾಬಾಯಿಗೆ ಭರ್ಜರಿ ಬಹುಮಾನಗಳು!

ಮಂಗಳವಾರ, 27 ಜುಲೈ 2021 (11:36 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ನಿನ್ನೆ ಮರಳಿರುವ ಮೀರಾಬಾಯಿ ಚಾನುಗೆ ಈಗ ಭರ್ಜರಿ ಕೊಡುಗೆಗಳು ಬಹುಮಾನದ ರೂಪದಲ್ಲಿ ಸಿಗುತ್ತಿದೆ.

Photo Courtesy: Twitter

ಸಾಧನೆ ಮಾಡಿ ಬಂದಿರುವ ತಮ್ಮ ರಾಜ್ಯದ ಹೆಮ್ಮೆಯ ಆಟಗಾರ್ತಿಗೆ ಮಣಿಪುರ ಸರ್ಕಾರ ಪೊಲೀಸ್ ಅಧೀಕ್ಷಕಿ ಹುದ್ದೆ ನೀಡಿದೆ. ಜೊತೆಗೆ 1 ಕೋಟಿ ರೂ. ಬಹುಮಾನವನ್ನೂ ನೀಡಿದೆ.

ಇದಲ್ಲದೆ ಮಣಿಪುರದಲ್ಲಿ ವಿಶ್ವದರ್ಜೆಯ ವೈಟ್ ಲಿಫ್ಟಿಂಗ್ ಅಕಾಡೆಮಿಯನ್ನು ತೆರೆಯಲಾಗುವುದು ಎಂದು ಸಿಎಂ ಎನ್. ಬಿರೆನ್ ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ