ಕೋಚ್ ಇಲ್ಲದೇ ಮಣಿಕ್ ಬಾತ್ರಾ ಆಡಿದ್ದೇಕೆ? ಕಾರಣ ಬಯಲು

ಮಂಗಳವಾರ, 27 ಜುಲೈ 2021 (09:50 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಟೇಬಲ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಮಣಿಕ್ ಭಾತ್ರಾ ಕೋಚ್ ಇಲ್ಲದೇ ಆಡಿದ್ದರು. ನಿನ್ನೆಯ ಸೋಲಿನ ಬಳಿಕ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.


ಮಣಿಕ್ ಜೊತೆ ಆಕೆಯ ವೈಯಕ್ತಿಕ ಕೋಚ್ ಪರಂಜಪೆ ಕೂಡಾ ಟೋಕಿಯೋಗೆ ಹೋಗಿದ್ದರು. ಆದರೆ ಅವರಿಗೆ ಕೋರ್ಟ್ ಪ್ರವೇಶಿಸಲು ಆಯೋಜಕರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ರನ್ನು ಕರೆದೊಯ್ಯುವಂತೆ ಭಾರತದ ಟೀಂ ಲೀಡರ್ ಎಂ.ಪಿ. ಸಿಂಗ್ ಸಲಹೆ ನೀಡಿದ್ದರು.

ಆದರೆ ಮಣಿಕ್ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಮಣಿಕ್ ಸಿಂಗಲ್ಸ್ ಪಂದ್ಯವಾಡುವಾಗ ಮೂರೂ ಪಂದ್ಯದ ವೇಳೆ ಅವರ ಕೋಚ್ ಗಳು ಯಾರೂ ಇಲ್ಲದೇ ಏಕಾಂಗಿಯಾಗಿ ಪಂದ್ಯವಾಡಿದ್ದರು. ಬಹುಶಃ ಇದರಿಂದಾಗಿಯೇ ಮಹತ್ವದ ಪಂದ್ಯದಲ್ಲಿ ಅವರಿಗೆ ಸರಿಯಾದ ಸಲಹೆ ಸಿಗದೇ ಸೋತು ಹೋದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ