ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಅಮೆರಿಕಾದ ಫೂನಿಕ್ಸ್ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲಿ ಕುಟುಂಬದ ವಕ್ತಾರರು ಕೂಡ ಅವರ ನಿಧನ ವಾರ್ತೆಯನ್ನು ದೃಢಪಡಿಸಿದ್ದಾರೆ. 32 ವರ್ಷಗಳ ದೀರ್ಘ ಕಾಲದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ವಕ್ತಾರ ಬೊಂಬ್ ಗುನ್ನೆಲ್ ಪ್ರಕಟಣೆ ಹೊರಹಾಕಿದ್ದಾರೆ.