ಬಾಕ್ಸಿಂಗ್ ಲೆಜೆಂಡ್ ಮೊಹಮ್ಮದ್ ಅಲಿ ಅಂತ್ಯಕ್ರಿಯೆ ಶುಕ್ರವಾರ ನೆರವೇರಿದ್ದು, ಜಗತ್ತಿನಾದ್ಯಂತ ಬಾಕ್ಸಿಂಗ್ ಪ್ರಿಯರಿಗೆ ಸಂಚಲನ ಮೂಡಿಸಿದ ಅಲಿ ಅಂತ್ಯಕ್ರಿಯೆಗೆ ತವರುನಗರ ಲೂವಿಸಿಲ್ಲೆಯಲ್ಲಿ ಸಾವಿರಾರು ಜನರು ನೆರೆದು ಅಂತಿಮ ನಮನ ಸಲ್ಲಿಸಿದರು. ಮೂರು ಬಾರಿ ಹೆವಿವೇಟ್ ವಿಶ್ವ ಚಾಂಪಿಯನ್ ಅಲಿ ಸುದೀರ್ಘ ಕಾಲ ಪಾರ್ಕಿನ್‌ಸನ್ ಕಾಯಿಲೆ ಜತೆ ಸೆಣಸಾಡಿ ಕಳೆದ ವಾರ ಮೃತಪಟ್ಟಿದ್ದರು.