ಜೊಕೊವಿಕ್ ಆಧಿಪತ್ಯದ ಸಮಸ್ಯೆ ಪರಿಹಾರಕ್ಕೆ ಲೆಂಡ್ಲ್ ಮೇಲೆ ಮರ್ರೆ ಭರವಸೆ

ಸೋಮವಾರ, 13 ಜೂನ್ 2016 (17:56 IST)
ಮಾಜಿ ಕೋಚ್ ಇವಾನ್ ಲೆಂಡ್ಲ್ ಜತೆ ತಮ್ಮ ಪುನರ್ಮಿಲನವು  ಟೆನ್ನಿಸ್‌ನಲ್ಲಿ ವಿಶ್ವ ನಂಬರ್ ಒನ್ ಸ್ಥಾನದಲ್ಲಿರುವ ನೊವಾಕ್ ಜೊಕೊವಿಕ್ ಆಧಿಪತ್ಯವನ್ನು ಕೊನೆಗಳಿಸುತ್ತದೆಂದು ಆಂಡಿ ಮರ್ರೆ ವಿಶ್ವಾಸ ಇರಿಸಿಕೊಂಡಿದ್ದಾರೆ. ಇವಾನ್ ಲೆಂಡ್ಲ್ ಜತೆ ತಮ್ಮ ಸಂಬಂಧ ಮುಂದುವರಿಕೆಗೆ ಅವರಿಂದ ದೂರವಾಗಿದ್ದ ಎರಡು ವರ್ಷಗಳ ಬಳಿಕ ಮರ್ರೆ ನಿರ್ಧರಿಸಿದರು.
 
ಜೋಕೊವಿಕ್ ಮರ್ರೆಯನ್ನು ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸೋಲಿಸಿ ಎಲ್ಲಾ ನಾಲ್ಕು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಜೋಕೊವಿಕ್ 34 ಪಂದ್ಯಗಳಲ್ಲಿ 24ನ್ನು ಗೆದ್ದಿದ್ದಾರಲ್ಲದೇ ಕಳೆದ 15 ಪಂದ್ಯಗಳಲ್ಲಿ ಸತತವಾಗಿ 13ರಲ್ಲಿ ಜಯಗಳಿಸಿದ್ದಾರೆ.
 
 ಮರ್ರೆ ಲೆಂಡ್ಲ್ ಜತೆ ತಮ್ಮ ಹಿಂದಿನ ಎರಡು ವರ್ಷಗಳ ಸುವರ್ಣ ಅವಧಿಯನ್ನು ಕಳೆದಿದ್ದರು. 2013ರಲ್ಲಿ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ 77 ವರ್ಷಗಳ ಬಳಿಕ ಬ್ರಿಟಿಶ್ ವ್ಯಕ್ತಿ ಗೆಲುವು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. 212ರಲ್ಲಿ ಯುಎಸ್ ಓಪನ್ ಕ್ರೌನ್ ಮತ್ತು 2012ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ