ಕುಸ್ತಿ ಪಟು ನರಸಿಂಗ್ ಯಾದವ್ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆ ಅಕ್ಷರಶಃ ಮುಗಿದಿದ್ದು, ಕುಸ್ತಿ ಪಟುವಿಗೆ ಅವರನ್ನು ಸಮರ್ಥಿಸಿಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಸುಳಿವು ನೀಡಿದ್ದಾರೆ. ಸುಶೀಲ್ ಕುಮಾರ್ ಅವರನ್ನು ಹಿಂದಿಕ್ಕಿ ರಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ನರಸಿಂಗ್ ಭಾನುವಾರ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.
ನಾಡಾ ವಾಡಾ ಸಂಹಿತೆಯಡಿ ಸ್ಥಾಪನೆಯಾದ ಸ್ವಯಮಾಧಿಕಾರದ ಸಂಸ್ಥೆಯಾಗಿದ್ದು, ಸ್ವಚ್ಛ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತದೆ ಮತ್ತು ಡೋಪಿಂಗ್ ತಡೆಯುತ್ತದೆ. ನರಸಿಂಗ್ ಪ್ರಕರಣದಲ್ಲಿ ವಾಡಾ ಸಂಹಿತೆ ಅನುಷ್ಠಾನಕ್ಕೆ ತರುವುದನ್ನು ಖಾತರಿ ಮಾಡುತ್ತೇವೆ ಎಂದು ಜುಲೈ 31ರಿಂದ ಆರಂಭವಾಗುವ ರನ್ ಫಾರ್ ಒಲಿಂಪಿಕ್ಸ್ ಕಾರ್ಯಕ್ರಮ ಪ್ರಕಟಿಸುತ್ತಾ ಗೋಯೆಲ್ ಹೇಳಿದರು.