ಜಾಹೀರಾತು ಒಪ್ಪಂದಗಳಿಗೆ ದುಬಾರಿ ಶುಲ್ಕ ಡಿಮ್ಯಾಂಡ್ ಮಾಡ್ತಿರುವ ನೀರಜ್ ಚೋಪ್ರಾ
ಈ ಮೊದಲು ಅವರು ವರ್ಷಕ್ಕೆ ಜಾಹೀರಾತು ಒಪ್ಪಂದಗಳಿಗೆ 10-15 ಲಕ್ಷ ರೂ. ಆದಾಯ ಗಳಿಸುತ್ತಿದ್ದರು. ಆದರೆ ಈಗ ಅದರ 10 ಪಟ್ಟು ಅಧಿಕ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಹೀಗಾಗಿ ಅವರ ಮಾರುಕಟ್ಟೆ ಮೌಲ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸನಿಹ ಬರುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಈಗಾಗಲೇ ನೀರಜ್ ಐದರಿಂದ ಆರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರಂತೆ.