ಅದು ಹೇಗೆ ಅಂತೀರಾ? 2012ರ ಓಲಂಪಿಕ್ಸ್‌ನಲ್ಲಿ ಕುಸ್ತಿ ಪಂದ್ಯದಲ್ಲಿ (60 ಕೆಜಿ. ಫ್ರಿಸ್ಟೈಲ್) ಮೊದಲ ಸ್ಥಾನ ಗಳಿಸಿದ್ದ ಅಜರ್‌ಬೈಜಾನ್‌ನ ತೊಗರುಲ್ ಅಸ್ಗರೊವ್ ಸಹ ನಿಷೇಧಿತ ಮದ್ದು ಸೇವಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದಿದ್ದ ಬೆಸಿಕ್ ಕುದುಕೊವ್ ಉದ್ದೀಪನಾ ಮದ್ದು ಸೇವಿಸಿರುವುದು ಕಳೆದ ನಾಲ್ಕು ದಿನಗಳ ಹಿಂದೆ ಸಾಬೀತಾಗಿತ್ತು. ಹೀಗಾಗಿ ಆ ಪದಕವನ್ನು ಯೋಗೇಶ್ವರ್ ಅವರಿಗೆ ಹಸ್ತಾಂತರಿಸುವ ಬಗ್ಗೆ ವರದಿ ಬಂದಿತ್ತು. ಆದರೆ ಮೃತ ಕುದುಕೊವ್ ಅವರ ಗೌರವಾರ್ಥ ಯೋಗೇಶ್ವರ್ ನಯವಾಗಿ ಬೆಳ್ಳಿ ಪದಕವನ್ನು ತಳ್ಳಿ ಹಾಕಿದ್ದರು.