ವಿಜೇಂದರ್ ಸಿಂಗ್ ತನ್ನ ವೃತ್ತಿಪರ ಬಾಕ್ಸಿಂಗ್ ಜೀವನಕ್ಕೆ ಶ್ರೇಷ್ಟ ಆರಂಭ ಮಾಡಿದ್ದು, ಸತತವಾಗಿ ಏಳು ಜಯಗಳ ಬಳಿಕ ಭಾರತದ ಬಾಕ್ಸರ್ ವಿಶ್ವ ಬಾಕ್ಸಿಂಗ್‌ನ ಘಟಾನುಘಟಿ ಬಾಕ್ಸರ್‌ಗಳತ್ತ ಕಣ್ಣು ಹಾಯಿಸಿದ್ದಾರೆ. ಆಸ್ಟ್ರೇಲಿಯಾದ ಕೆರ್ರಿ ಹೋಪ್ ಅವರನ್ನು ಸೋಲಿಸಿ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಪ್ರಶಸ್ತಿ ಗೆದ್ದಿರುವ ವಿಜೇಂದರ್ ಈಗ ಬ್ರಿಟಿಷ್-ಪಾಕಿಸ್ತಾನಿ ಬಾಕ್ಸರ್ ಅಮೀರ್ ಖಾನ್ ಅವರ ಜತೆ ಮುಖಾಮುಖಿಯಾಗಲು ಎದುರುನೋಡುತ್ತಿದ್ದಾರೆ.
ಅಮೀರ್ ಖಾನ್ ವಿಜೇಂದರ್ ಕುರಿತು ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ವಿಜೇಂದರ್ ಅವರನ್ನು ಇಷ್ಟಪಡುತ್ತೇನೆ. ಅವರು ಗ್ರೇಟ್ ಬಾಕ್ಸರ್. ಆದರೆ ಕೆಲವು ಬಾರಿ ಸಾಮರ್ಥ್ಯಕ್ಕಿಂತ ಹೆಚ್ಚು ಸಾಧಿಸಲು ಆಗುವುದಿಲ್ಲ. ನಮ್ಮಂತ ಸುಭದ್ರವಾಗಿ ನೆಲೆಗೊಂಡ ಬಾಕ್ಸರ್‌ಗಳಿಗೆ ಸವಾಲು ಹಾಕುವುದು ಅವರ ವೃತ್ತಿಜೀವನದಲ್ಲಿ ತುಂಬಾ ಶೀಘ್ರವೆನಿಸುತ್ತದೆ. ಇದು ಅವರ ವೃತ್ತಿ ಜೀವನವನ್ನು ನಾಶಮಾಡುತ್ತದೆ. ಅವರಿಗೆ ಅವಮರ್ಯಾದೆ ಮಾಡಬೇಕೆಂಬ ನನ್ನ ಉದ್ದೇಶವಲ್ಲ. ಆದರೆ ಅವರು ಎದುರಾಳಿಗಳನ್ನು ಆಯ್ಕೆ ಮಾಡುವಾಗ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು ಎಂದಿದ್ದಾರೆ.
ಅವರ ಮತ್ತು ನನ್ನ ಮಟ್ಟದ ಬಗ್ಗೆ ತುಂಬಾ ವ್ಯತ್ಯಾಸವಿದೆ . ಮೇಲ್ಮಟ್ಟದಲ್ಲಿ ವಿಜೇಂದರ್ ಅನುಭವದ ಕೊರತೆ ಹೊಂದಿದ್ದಾರೆಂದೂ ಅವರು ತಿಳಿಸಿದರು. ವಿಜೇಂದರ್ ಅವರಿಗೆ ಒಳ್ಳೆಯ ಭವಿಷ್ಯವಿದೆ. ಅವರು ಶ್ರೇಷ್ಟ ಪಂದ್ಯವಾಡಿದ್ದು, ಈ ಕ್ಷಣದಲ್ಲಿ ಅವರು ಅನುಭವದ ಕೊರತೆ ಹೊಂದಿದ್ದಾರೆ ಎಂದೂ ಹೇಳಿದರು.