ಸೀರೆಯಲ್ಲಿ ಮಿಂಚಿದ ಪಿ.ವಿ. ಸಿಂಧು

ಭಾನುವಾರ, 22 ಆಗಸ್ಟ್ 2021 (09:20 IST)
ಹೈದರಾಬಾದ್: ಸದಾ ಜಾಕೆಟ್, ಜೆರ್ಸಿ ತೊಡುತ್ತಿದ್ದ ಪಿ.ವಿ. ಸಿಂಧು ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.


ಬ್ಯಾಡ್ಮಿಂಟನ್ ರಾಣಿಯ ಹೊಸ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯಕ್ಕೆ ಬ್ರೇಕ್ ನಲ್ಲಿರುವ ಸಿಂಧು ಸ್ಟೈಲಿಶ್ ಆಗಿ ಸೀರೆ ಉಟ್ಟುಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ಮೇಲೆ ಸಿಂಧು ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಸದಾ ಆಕೆಯನ್ನು ಸ್ಪೋರ್ಟ್ಸ್ ದಿರಿಸಿನಲ್ಲೇ ನೋಡಿದ್ದ ಫ್ಯಾನ್ಸ್ ಗೆ ಈ ಹೊಸ ಲುಕ್ ಇಷ್ಟವಾಗಿದೆ ಎಂದೇ ಹೇಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ