ಚೈನೀಸ್ ತೈಪೆಯ ಈ ಆಟಗಾರ್ತಿ ಪ್ರಸಕ್ತ ಬ್ಯಾಡ್ಮಿಂಟನ್ ನಲ್ಲಿ ವಿಶ್ವ ನಂ.1 ಆಟಗಾರ್ತಿ. ಅತ್ಯುತ್ತಮ ಫಾರ್ಮ್ ನಲ್ಲಿರುವ ಈಕೆಯನ್ನು ಇಂದು ಮಣಿಸಿದರೆ ಮಾತ್ರ ಸಿಂಧುವಿನ ಫೈನಲ್ ಕನಸು ನನಸಾಗಲಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನಗಿಂತ ಎರಡು ಶ್ರೇಯಾಂಕ ಮೇಲಿದ್ದ ಆಟಗಾರ್ತಿಯನ್ನು ಸೋಲಿಸಿದ್ದ ಸಿಂಧುಗೆ ಇಂದು ಮತ್ತಷ್ಟು ಕಠಿಣ ಸವಾಲು ಎದುರಾಗಲಿದೆ. ಸಿಂಧುವಿಗಿರುವ ಏಕೈಕ ಬಲವೆಂದರೆ ಆಕೆಯ ಆತ್ಮವಿಶ್ವಾಸ ಮತ್ತು ಎತ್ತರದ ನಿಲುವು.
ಇದುವರೆಗೆ ಸಿಂಧು ತೈ ಜು ಯಿಂಗ್ ವಿರುದ್ಧ 13-7 ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ ಕಳೆದ ಮೂರು ಮುಖಾಮುಖಿಯಲ್ಲೂ ಸಿಂಧು ಯಿಂಗ್ ವಿರುದ್ಧ ಸೋಲು ಅನುಭವಿಸಿದ್ದರು. ಆದರೆ ವಿಶ್ವ ಚಾಂಪಿಯನ್ ಶಿಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಸಿಂಧುವೇ ಯಿಂಗ್ ವಿರುದ್ಧ ಮೇಲುಗೈ ಹೊಂದಿದ್ದರು. ಈಗ ಸಿಂಧು ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಇಂದು ವಿಶ್ವ ನಂ.1 ಆಟಗಾರ್ತಿಯನ್ನೇ ಮಣಿಸುತ್ತಾರಾ ಕಾದು ನೋಡಬೇಕಿದೆ.