ಬೆಂಗಳೂರಿಗೆ ಭೇಟಿ ನೀಡಿದ ಪಿ. ವಿ ಸಿಂಧು

ಗುರುವಾರ, 8 ಸೆಪ್ಟಂಬರ್ 2016 (16:59 IST)
ಒಲಂಪಿಕ್ ಪದಕ ವಿಜೇತೆ ಪಿ. ವಿ ಸಿಂಧು ಇಂದು ಬೆಂಗಳೂರಿಗೆ ಆಗಮಿಸಿದ್ದರು. ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನಕ್ಕೆ ಭೇಟಿ ನೀಡಿದ ಅವರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ದರ್ಶನ ಪಡೆದು ಆಶೀರ್ವಾದವನ್ನು ಪಡೆದುಕೊಂಡರು. 

ಸಿಂಧು ಸಾಧನೆಯನ್ನು ರವಿಶಂಕರ್ ಗುರೂಜಿ ಮನಸಾರೆ ಹೊಗಳಿದರು. 
 
ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ಅವರು ಶ್ರೀಶ್ರೀ ರಾಘವೇಶ್ವರ ಭಾರತೀ ಅವರ ಆಶೀರ್ವಾದವನ್ನು ಸಹ ಪಡೆದುಕೊಂಡರು. ಮಠದ ಪರವಾಗಿ ಅವರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು. 
 
ಕಳೆದ ನಾಲ್ಕು ದಿನಗಳ ಹಿಂದೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದ ಸಿಂಧು ಹರಕೆ ತೀರಿಸಿ ಮರಳಿದ್ದರು. ರಿಯೋ ಓಲಂಪಿಕ್ಸ್‌ನಲ್ಲಿ ಪದಕ ಗೆದ್ದರೆ ತಿಮ್ಮಪ್ಪನಿಗೆ ತುಲಾಭಾರ ಮಾಡಿಸುವ ಹರಕೆ ಹೊತ್ತಿದ್ದ ಸಿಂಧು 68 ಕೆಜಿ ಬೆಲ್ಲವನ್ನು ಅರ್ಪಿಸಿದ್ದರು. ಅವರ ಕೋಚ್ ಗೋಪಿಚಂದ್ ಸಹ ಮುಡಿಕೊಟ್ಟು ಹರಕೆ ಸಲ್ಲಿಸಿದ್ದರು. 
 
ಒಲಂಪಿಕ್ ಪಂದ್ಯವಳಿಯಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಸಿಂಧು ಅವರದಾಗಿದೆ. 

ವೆಬ್ದುನಿಯಾವನ್ನು ಓದಿ