ರಿಯೋಗೆ ಇನ್ನೂ ತೆರಳದ ಪಯಸ್, ಬೋಪಣ್ಣ ಜತೆ ಫ್ಲಾಟ್ ಹಂಚಿಕೊಳ್ಳಲು ನಿರಾಕರಣೆ

ಗುರುವಾರ, 4 ಆಗಸ್ಟ್ 2016 (20:01 IST)
ಭಾರತದ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ 2016ರ ಒಲಿಂಪಿಕ್ಸಿ ಆಡಲು ರಿಯೋ ಡಿ ಜನೈರೊಗೆ ಇನ್ನೂ ಮುಟ್ಟಿಲ್ಲವಾದ್ದರಿಂದ ಅವರ ಡಬಲ್ಸ್ ಜತೆಗಾರ ರೋಹನ್ ಬೋಪಣ್ಣ ಸಾನಿಯಾ ಮಿರ್ಜಾ ಮತ್ತು ಸರ್ಬಿಯಾದ ನೆನಾಡ್ ಜಿಮೋಂಜಿಕ್ ಜತೆ ತರಬೇತಿ ಪಡೆಯುತ್ತಿದ್ದಾರೆ.

 ಪಯಸ್- ಬೋಪಣ್ಣ ಅವರು ತಮ್ಮ ಒಲಿಂಪಿಕ್ ಅಭಿಯಾನಕ್ಕೆ ಆಗಸ್ಟ್ 6ರಂದು ಚಾಲನೆ ನೀಡಲಿದ್ದಾರೆ. ಭಾರತದ ಆಟವಾಡದ ನಾಯಕ ಜೀಶನ್ ಅಲಿ ಈ ಕುರಿತು ಪ್ರತಿಕ್ರಿಯಿಸಿ, 6ನೇ ತಾರೀಖು ಇರುವ ಪಂದ್ಯಕ್ಕೆ 4ರಂದು ಆಗಮಿಸುವುದರಿಂದ ಸಿದ್ಧತೆಗೆ ಸಾಕಷ್ಟು ಸಮಯ ಸಿಗುವುದಿಲ್ಲ ಎಂದಿದ್ದಾರೆ.
 
ಪಯಸ್ ಅವರು ಕಳೆದ ಆಗಸ್ಟ್ 1ರಂದು ಉಳಿದ ಆಟಗಾರರ ಜತೆ ಆಗಮಿಸುವ ಭರವಸೆ ನೀಡಿದ್ದರು. ಆದರೆ ನ್ಯೂಯಾರ್ಕ್‌ನಲ್ಲಿ ವರ್ಲ್ಡ್ ಟೀಂ ಟೆನ್ನಿಸ್ ಟೂರ್ನಿಯಲ್ಲಿ ಭಾಗವಹಿಸಿದ್ದರಿಂದ ಅವರು ಬರುವುದು ತಡವಾಗುತ್ತಿದೆ. ಪಯಸ್ ಭಾರತದ ಒಲಿಂಪಿಕ್ ಸಂಸ್ಥೆಗೆ ತಾವು ಬೋಪಣ್ಣ ಜತೆ ಒಲಿಂಪಿಕ್ ಗ್ರಾಮದಲ್ಲಿ ಫ್ಲಾಟ್ ಹಂಚಿಕೊಳ್ಳಲು ಬಯಸುವುದಿಲ್ಲವೆಂದು ಮಾಹಿತಿ ನೀಡಿದ್ದಾರೆ.
 
 ಬೋಪಣ್ಣ ಮತ್ತು ಪಯಸ್ ನಡುವೆ ಈಗಾಗಲೇ ತಿಕ್ಕಾಟವಿದ್ದು, ಬೋಪಣ್ಣ ಸಾಕೇತ್ ಮೈನೇನಿ ಅವರನ್ನು ಒಲಿಂಪಿಕ್ಸ್‌ಗೆ ತಮ್ಮ ಡಬಲ್ಸ್ ಜತೆಗಾರನಾಗಿ ಆಯ್ಕೆ ಮಾಡಿದ್ದರು. ಆದರೆ ಟೆನ್ನಿಸ್ ಒಕ್ಕೂಟ ಪಯಸ್ ಅವರನ್ನು ಬೋಪಣ್ಣ ಡಬಲ್ಸ್ ಜತೆಗಾರನಾಗಿ ರಿಯೋಗೆ ಆಯ್ಕೆ ಮಾಡಿದೆ.
 
 ಆದಾಗ್ಯೂ ಡೇವಿಸ್ ಕಪ್ ಅಭಿಯಾನದಲ್ಲಿ ಈ ಜೋಡಿ ಜಯಗಳಿಸಿ ತಮ್ಮ ನಡುವೆ ಟೆನಿಸ್ ಅಂಗಳದ ಕೆಮಿಸ್ಟ್ರಿ ಚೆನ್ನಾಗಿದೆ ಎಂದಿದ್ದರು. 

ವೆಬ್ದುನಿಯಾವನ್ನು ಓದಿ