ಪ್ಯಾರಾಲಿಂಪಿಕ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಪ್ರಮೋದ್ ಭಗತ್
ಶನಿವಾರ, 4 ಸೆಪ್ಟಂಬರ್ 2021 (16:54 IST)
ಟೋಕಿಯೋ: ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನ ಅಮೋಘವಾಗಿದೆ. ಇಂದು ಭಾರತ ಮತ್ತೆ ಎರಡು ಚಿನ್ನ ಗೆದ್ದುಕೊಂಡಿರುವುದು ವಿಶೇಷ.
ಬ್ಯಾಡ್ಮಿಂಟನ್ ವಿಭಾಗದಲ್ಲಿ ಚಿನ್ನ ಗೆದ್ದ ಪ್ರಮೋದ್ ಭಗತ್ ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಕಂಚಿನ ಪದಕವನ್ನು ಮನೋಜ್ ಸರ್ಕಾರ್ ಗೆದ್ದುಕೊಂಡಿದ್ದಾರೆ.
ಇಂದು ಎರಡು ಚಿನ್ನ ಗೆಲ್ಲುವುದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 17 ಪದಕಗಳೊಂದಿಗೆ 25 ನೇ ಸ್ಥಾನಕ್ಕೇರಿತು. ಇದಕ್ಕೂ ಮೊದಲು ಇಂದು ಶೂಟಿಂಗ್ ನಲ್ಲಿ ಮನೀಶ್ ನರಾವಲ್ ಚಿನ್ನ ಗೆದ್ದಿದ್ದರು.