ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆದ್ದುಕೊಂಡ ಪಾಟ್ನಾ ಪೈರೇಟ್ಸ್

ಸೋಮವಾರ, 1 ಆಗಸ್ಟ್ 2016 (20:03 IST)
ಹೈದರಾಬಾದ್ ಗಾಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಸೀಸನ್ ಪ್ರೊ ಕಬಡ್ಡಿ ಲೀಗ್‌‌ನಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಸದೃಢ ಜೈಪುರ್ ಪಿಂಕ್ ಪ್ಯಾಂಥರ್ಸ್‌ ವಿರುದ್ಧ ಫೈನಲ್‌ನಲ್ಲಿ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಸುಮಾರು 40 ನಿಮಿಷಗಳ ಹಣಾಹಣಿ ಹೋರಾಟದಲ್ಲಿ ಎರಡೂ ತಂಡಗಳು ಮೇಲುಗೈ ಸಾಧಿಸಲು ಹೋರಾಟ ಮಾಡಿದರೂ ಪೈರೇಟ್ಸ್ 37-29 ಪಾಯಿಂಟ್‌ಗಳಿಂದ ಜಯಗಳಿಸಿತು.
 
ಪೈರೇಟ್ಸ್ ನಾಯಕ ಧರ್ಮರಾಜ್ ಚೆರಲಾಥನ್ ಅಭಿಮಾನಿಗಳ ಹರ್ಷೋದ್ಗಾರದ ನಡುವೆ  ಟ್ರೋಫಿಯನ್ನು ಹಿಡಿದೆತ್ತಿ ಸಂಭ್ರಮಿಸಿದರು.  ಈ ಪಂದ್ಯ ಪಾಟ್ನಾದ ಆಕ್ರಮಣಕಾರಿ ಆಟದ ವಿರುದ್ಧ ಜೈಪುರದ ತಂತ್ರವಾಗಿತ್ತು. ಕೊನೆಯಲ್ಲಿ ಪೈರೇಟ್ಸ್ ಚಾಂಪಿಯನ್ನರಾಗಿ ಹೊಮ್ಮಿ ಎರಡನೇ ಬಾರಿ ಟ್ರೋಫಿ ಗೆದ್ದುಕೊಂಡರು.  ಪೈರೇಟ್ ಪರದೀಪ್ ನಾರ್ವಾಲ್ 17 ಪಾಯಿಂಟ್ ಸ್ಕೋರ್ ಮಾಡಿ ಶ್ರೇಷ್ಟ ರೈಡರ್ ಪ್ರಶಸ್ತಿಗೆ ಪಾತ್ರರಾದರು. ಹೋಡಿ ಒಶ್ಟಾರಾಕ್ ಶ್ರೇಷ್ಟ ರಕ್ಷಕ ಪ್ರಶಸ್ತಿಗೆ ಪಾತ್ರರಾದರು. ತೆಲುಗು ಟೈಟಾನ್ಸ್ ರಾಹುಲ್ ಚೌಧರಿ 146 ಪಾಯಿಂಟ್‌ಗಳೊಂದಿಗೆ ಅತ್ಯಂತ ಯಶಸ್ವಿ ರೇಡರ್ ಎನಿಸಿಕೊಂಡರು.
 
 ಇದಕ್ಕೆ ಮುಂಚೆ ಮೂರನೇ ಸ್ಥಾನಕ್ಕಾಗಿ ಪುನೇರಿ ಪಾಲ್ಟಾನ್ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿತು. ಪುನೇರಿ ಪಾಲ್ಟಾನ್ ಪರ ದೀಪಕ್ ನಿವಾಸ್ ಹೂಡಾ 17 ಪಾಯಿಂಟ್ ಕಬಳಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ