ಚೆಸ್ ವಿಶ್ವಕಪ್ ಫೈನಲ್: ಇತಿಹಾಸ ಸೃಷ್ಟಿಸಲು ಮುಂದಾದ ಭಾರತದ ಪ್ರಜ್ಞಾನಂದ
18 ವರ್ಷದ ಪ್ರಜ್ಞಾನಂದ ಇದೀಗ ಆರಂಭವಾಗಿರುವ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ಸೆಣಸಾಡುತ್ತಿದ್ದಾರೆ. ವಿಶ್ವಕಪ್ ಚೆಸ್ ಪಂದ್ಯಾವಳಿಯ ಫೈನಲ್ ತಲುಪಿದ ಅತ್ಯಂತ ಕಿರಿಯ ಎಂಬ ಹಿರಿಮೆ ಪ್ರಜ್ಞಾನಂದನದ್ದು.
ಒಂದು ವೇಳೆ ಅವರು ಇಂದು ಗೆದ್ದರೆ ಅತೀ ಕಿರಿಯ ಚೆಸ್ ಪಟು ಎಂಬ ಇತಿಹಾಸ ಸೃಷ್ಟಿಸಲಿದ್ದಾರೆ. ಸೆಮಿಫೈನಲ್ ನಲ್ಲಿ ವಿಶ್ವ ನಂ.3 ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾರನ್ನು ಪ್ರಜ್ಙಾನಂದ ಸೋಲಿಸಿದ್ದರು. ಪ್ರಜ್ಞಾನಂದಗೆ ಯಶಸ್ಸು ಸಿಗಲಿ ಎಂದು ಇಡೀ ಭಾರತ ಪ್ರಾರ್ಥಿಸುತ್ತಿದೆ.