ಐದೂವರೆ ಗಂಟೆ ಕಾದಾಡಿ ಟೆನಿಸ್ ಸಾರ್ವಭೌಮನಾದ ರಫೆಲ್ ನಡಾಲ್

ಸೋಮವಾರ, 31 ಜನವರಿ 2022 (09:28 IST)
ಮೆಲ್ಬರ್ನ್: ವಿಶ್ವ ಟೆನಿಸ್ ನ ದಿಗ್ಗಜ ಆಟಗಾರ ರಫೆಲ್ ನಡಾಲ್ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ತೋರಿದ ನಿರ್ವಹಣೆ ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿರಲಿದೆ.

ಬರೋಬ್ಬರಿ ಐದೂವರೆ ಗಂಟೆ ಕಾದಾಡಿ ಎದುರಾಳಿ ಡೇನಿಯಲ್ ಮಡ್ವಡೇವ್ ವಿರುದ್ಧ 2-6,6-7 (5-7),6-4,7-5 ಅಂತರದಿಂದ ಗೆಲುವು ಕಂಡರು. ವಿಶೇಷವೆಂದರೆ ಮೊದಲೆರಡು ಸೆಟ್ ಗಳಲ್ಲಿ ಹಿನ್ನಡೆಯಲ್ಲಿದ್ದ ನಡಾಲ್ ಬಳಿಕ ಕೆಚ್ಚೆದಯ ಹೋರಾಟ ನಡೆಸಿ ಪಂದ್ಯಕ್ಕೆ ಮರಳಿದ್ದಲ್ಲದೆ, ಐತಿಹಾಸಿಕ ಗೆಲುವು ಸಾಧಿಸಿದರು.

ಇದರೊಂದಿಗೆ 21 ನೇ ಗ್ರಾನ್ ಸ್ಲಾಮ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಲ್ಲದೆ, ಎಲ್ಲಾ ಗ್ರಾನ್ ಸ್ಲಾಮ್ ಟೂರ್ನಿಗಳನ್ನು ಎರಡು ಬಾರಿ ಗೆದ್ದ ನಾಲ್ಕನೇ ಆಟಗಾರ ಹಾಗೂ ಅತ್ಯಧಿಕ ಗ್ರಾನ್ ಸ್ಲಾಮ್ ಟೂರ್ನಿ ಜಯಿಸಿದ ಟೆನಿಸಿಗ ಎಂಬ ದಾಖಲೆ ಬರೆದರು. ನಡಾಲ್ ಸಾಧನೆಗೆ ಇಡೀ ಕ್ರೀಡಾ ಜಗತ್ತು ತಲೆಬಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ