ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್

ಶನಿವಾರ, 13 ಆಗಸ್ಟ್ 2016 (10:50 IST)
ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು ಒಲಿಂಪಿಕ್ ಪದಕ ಗಳಿಸಲು ಕೇವಲ ಒಂದು ಗೆಲುವು ಬೇಕಾಗಿದ್ದು, ಟರ್ಕಿಯ ಸೈಪಲ್ ಆಂಡರ್ ಅವರನ್ನು 3-0 ಯಿಂದ ಸೋಲಿಸಿ 75 ಕೆಜಿ ಮಿಡಲ್‌ವೇಟ್‌ ಬಾಕ್ಸಿಂಗ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. 24 ವರ್ಷದ ಬಾಕ್ಸರ್ ಕೆಲವು ಪ್ರತಿ ಪಂಚ್‌ಗಳೊಂದಿಗೆ ವೇಗದ ಗತಿಯ ಮೊದಲ ಸುತ್ತಿನಲ್ಲಿ ಬಾಕ್ಸಿಂಗ್ ಆರಂಭಿಸಿ ಅದೇ ಗತಿಯನ್ನು ಕೊನೆಯವರೆಗೆ ಉಳಿಸಿಕೊಂಡರು. 
 
 ಭಾರತದ ಪುರುಷರ ಹಾಕಿ ಟೀಂ ಕೆನಡಾ ವಿರುದ್ಧ 2-2ರಿಂದ ಡ್ರಾ ಮಾಡಿಕೊಳ್ಳುವ ಮೂಲಕ ಪೂಲ್ ಗೇಮ್ ಮುಗಿಸಿದೆ. ಅರ್ಜಂಟೈನಾ ಐರ್ಲೆಂಡ್ ವಿರುದ್ಧ ಗೆಲುವು ಗಳಿಸಿದರೆ ಭಾರತ ಬೆಲ್ಜಿಯಂ ವಿರುದ್ಧ ಕ್ವಾರ್ಟರ್ ಫೈನಲ್ಸ್ ಆಡಬೇಕಾಗುತ್ತದೆ.  ಲಂಡನ್ ಗೇಮ್ಸ್ ಕಂಚಿನ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ಚೈನ್ ಸಿಂಗ್ ರೈಫಲ್ ಶೂಟಿಂಗ್‌ನ ಅರ್ಹತಾ ಸುತ್ತಿನಲ್ಲಿ ಸೋತರು.

ಅಥ್ಲೆಟಿಕ್ಸ್ ಟ್ರಾಕ್ ಮತ್ತು  ಫೀಲ್ಡ್ ಈವೆಂಟ್‌ನಲ್ಲಿ ಭಾರತದ ಅಥ್ಲೀಟ್‌ಗಳು ಕಳಪೆ ಆರಂಭ ಕಂಡು, ಸ್ಟಾರ್ ಡಿಸ್ಕರ್ ಎಸೆತಗಾರ ವಿಕಾಸ್ ಗೌಡ ಒತ್ತಡಕ್ಕೆ ಸಿಲುಕಿ 58.99 ಮೀಟರ್ ಡಿಸ್ಕಸ್ ಎಸೆಯುವ ಮೂಲಕ 28ನೇ ಸ್ಥಾನ ಪಡೆದು ಎಲಿಮಿನೇಟ್ ಆದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ