ರಿಯೋ ಪದಕ ವಿಜೇತರಿಗೆ ಈ ವರ್ಷವೇ ಖೇಲ್ ರತ್ನಾ, ಅರ್ಜುನ ಪ್ರಶಸ್ತಿಗೆ ಪರಿಗಣನೆ

ಬುಧವಾರ, 25 ಮೇ 2016 (19:39 IST)
ಒಲಿಂಪಿಕ್ ಪದಕ ವಿಜೇತರಿಗೆ ತಕ್ಷಣದ ಮನ್ನಣೆ ಸಿಗುವಂತಾಗಲು ಮುಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರನ್ನು ಈ ವರ್ಷದ ಖೇಲ್ ರತ್ನಾ ಮತ್ತು ಅರ್ಜುನ ಪ್ರಶಸ್ತಿಗಳಿಗೆ ಪರಿಗಣಿಸುವುದಾಗಿ ಕ್ರೀಡಾ ಸಚಿವಾಲಯ ತಿಳಿಸಿದೆ.

 ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಸಾಧನೆಗಳನ್ನು ಮಾಡಿದ ಮೇಲೆ ಒಂದು ಪೂರ್ಣ ವರ್ಷವನ್ನು ಅಥ್ಲೀಟ್‌ಗಳು ಕಾಯುವುದರಿಂದ ತಪ್ಪಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. 
 
ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕ ವಿಜೇತರಾಗಿದ್ದರೂ  ಖೇಲ್ ರತ್ನಾ ಪ್ರಶಸ್ತಿ ಸಿಗದಿದ್ದವರಿಗೆ ಈ ಕ್ರೀಡಾ ಗೌರವಕ್ಕೆ ಪರಿಗಣಿಸಲಾಗುತ್ತದೆ ಎಂದು ಹೇಳಿದರು. 
 
 ಟೀಂ ಈವೆಂಟ್‌ಗಳಲ್ಲಿ ತಂಡವು ಗೆದ್ದ ಪದಕದಲ್ಲಿ ಉತ್ಕೃಷ್ಟ ಸಾಧ್ನೆ ಮಾಡಿದ ಆಟಗಾರನಿಗೆ ಕೂಡ ಅರ್ಜುನ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ