ವೈಯಕ್ತಿಕ ಮೆಡ್ಲೆಯಲ್ಲಿ 22ನೇ ಚಿನ್ನ ಗೆದ್ದ ಮೈಕೇಲ್ ಫೆಲ್ಪ್ಸ್

ಶುಕ್ರವಾರ, 12 ಆಗಸ್ಟ್ 2016 (14:53 IST)
ಮೈಕೇಲ್ ಫೆಲ್ಪ್ಸ್ 200 ಮೀ ವೈಯಕ್ತಿಕ ಮೆಡ್ಲೆಯಲ್ಲಿ ಜಯ ಸಾಧಿಸುವ ಮೂಲಕ ಒಟ್ಟು 22 ಚಿನ್ನದ ಪದಕಗಳನ್ನು ಗಳಿಸಿದ ಗೌರವಕ್ಕೆ ಪಾತ್ರರಾದರು.

ಫೆಲ್ಪ್ಸ್ ನಾಲ್ಕು ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದ ಮೂರನೇ ಒಲಿಂಪಿಯನ್ ಎಂಬ ಗೌರವಕ್ಕೆ ಪಾತ್ರರಾಗಿದ್ದು,  ಈ ಸಾಧನೆ ಮಾಡಿದ ಡಿಸ್ಕಸ್ ಎಸೆತಗಾರ ಅಲ್ ಒಯಿರ್ಟರ್ ಮತ್ತು ಲಾಂಗ್ ಜಂಪ್‌ನ ಕಾರ್ಲ್ ಲೆವಿಸ್ ಸಾಲಿನಲ್ಲಿ ಸೇರಿದರು.

ಬ್ರೆಸ್ಟ್‌ಸ್ಟ್ರೋಕ್ ಮೂರನೇ ಲೆಗ್‌ನ ಕೊನೆಯವರೆಗೆ ಎರಡನೆಯವರಾಗಿ ಉಳಿದಿದ್ದ ಫೆಲ್ಪ್ಸ್ ಒಂದು ನಿಮಿಷ 54.66 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರು. ಬೆಳ್ಳಿ ಪದಕ ವಿಜೇತ ಕೊಸುಕೆ ಹಾಗಿನೊ ಅವರಿಗಿಂತ ಎರಡು ಸೆಕೆಂಡ್ ಮುಂಚಿತವಾಗಿ ಫೆಲ್ಪ್ಸ್ ಗುರಿಯನ್ನು ಮುಟ್ಟಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ