ರಿಯೋದಲ್ಲಿ ಭಾರತಕ್ಕೆ ಒಂದು ಚಿನ್ನ ಸೇರಿದಂತೆ 8 ಪದಕಗಳ ಗೆಲುವು: ಗೋಲ್ಡ್‌ಮನ್ ಸಚ್ ಸಮೀಕ್ಷೆ

ಬುಧವಾರ, 3 ಆಗಸ್ಟ್ 2016 (14:54 IST)
ಭಾರತ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸೇರಿದಂತೆ 8 ಪದಕಗಳನ್ನು ಗೆಲ್ಲುವುದೆಂದು ನಿರೀಕ್ಷಿಸಲಾಗಿದೆ ಎಂದು ಗೋಲ್ಡ್‌ಮನ್ ಸಚ್ಸ್ ಸಮೀಕ್ಷೆ ತಿಳಿಸಿದೆ. ಆಗಸ್ಟ್ 5ರಿಂದ ಆರಂಭವಾಗುವ ಒಲಿಂಪಿಕ್ಸ್‌ನಲ್ಲಿ ಪ್ರತಿಯೊಂದು ರಾಷ್ಟ್ರ ಗೆಲ್ಲುವ ಪದಕಗಳ ಸಂಖ್ಯೆ ಮತ್ತು ಅವುಗಳ ಬಣ್ಣಗಳ ಬಗ್ಗೆ ಜಾಗತಿಕ ಹಣಕಾಸು ಸಂಸ್ಥೆ ತನ್ನ ಒಲಿಂಪಿಕ್ಸ್ ಮತ್ತು ಎಕನಾಮಿಕ್ಸ್ ವರದಿಯಲ್ಲಿ ಭವಿಷ್ಯ ನುಡಿದಿದೆ.
 
 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಸಾಧಿಸಿದ ಪದಕಗಳಿಗಿಂತ ಈಗ ಅಂದಾಜು ಮಾಡಿರುವ ಪದಕಗಳ ಟ್ಯಾಲಿ 2ರಷ್ಟು ಹೆಚ್ಚಾಗಿದೆ. ಭಾರತ ಎರಡು ಚಿನ್ನ ಸೇರಿದಂತೆ ಐದು ಪದಕ ಗೆಲ್ಲುತ್ತದೆಂದು ಗೋಲ್ಡ್ ಮನ್ ಆ ಸಂದರ್ಭದಲ್ಲಿ ಅಂದಾಜು ಮಾಡಿತ್ತು.. ಆದರೆ ಭಾರತ ಗೆದ್ದ ಪದಕಗಳ ವಾಸ್ತವ ಟ್ಯಾಲಿ 6 ಪದಕಗಳಾಗಿದ್ದು, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಾಗಿದ್ದವು.
 
 ಇದರ ಜತೆಗೆ ಗೋಲ್ಡ್‌ಮನ್ ಸಚ್ಸ್,  ಅಮೆರಿಕ ಮತ್ತು ಚೀನಾ ಟೇಬಲ್ ಟಾಪರ್ಸ್ ಆಗಿ ಹೊಮ್ಮಲಿದ್ದು, 106 ಮತ್ತು 89 ಪದಕಗಳನ್ನು ಗೆಲ್ಲುತ್ತದೆಂದು ಮುನ್ಸೂಚನೆ ನೀಡಿದೆ.
 
ಅಮೆರಿಕ 45 ಚಿನ್ನದ ಪದಕ ಗೆಲ್ಲುತ್ತೆಂದೂ ಮತ್ತು ಚೀನಾದ ಪಾಲು 36 ಪದಕಗಳು ಎಂದೂ ಗೋಲ್ಡ್‌ಮನ್ ಸುಳಿವು ನೀಡಿದೆ. ಆದರೆ ರಷ್ಯಾದ ಬಹುತೇಕ ಅಥ್ಲೀಟ್‌ಗಳನ್ನು ಉದ್ದೀಪನ ಮದ್ದು ಆರೋಪಗಳ ಹಿನ್ನೆಲೆಯಲ್ಲಿ  ನಿಷೇಧಿಸಿದ್ದರಿಂದ ಪದಕಗಳ ಪಟ್ಟಿಯಿಂದ ಅದನ್ನು ಹೊರಗಿಟ್ಟಿದೆ.
 
ಇತ್ತೀಚೆಗೆ ಅಸೋಸಿಯೇಟೆಡ್ ಪ್ರೆಸ್ ಸಮೀಕ್ಷೆಯಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುತ್ತಾರೆಂದೂ, ಜೀತು ರಾಯ್ 50 ಮೀ ಪಿಸ್ತೂಲು ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ