ರಿಯೊ ಒಲಿಂಪಿಕ್ಸ್: ಈಜುಪಟು ಮೈಕೇಲ್ ಫೆಲ್ಪ್ಸ್‌ಗೆ ಒಟ್ಟು 21 ಚಿನ್ನದ ಪದಕ
ಬುಧವಾರ, 10 ಆಗಸ್ಟ್ 2016 (12:34 IST)
ಖ್ಯಾತ ಈಜುಪಟು ಅಮೆರಿಕದ ಮೈಕೇಲ್ ಫೆಲ್ಪ್ಸ್ ತಮ್ಮ ಅಚ್ಚರಿಯ ಫಾರಂ ಮುಂದುವರಿಸಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮೊದಲಿಗೆ 200 ಮೀ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಫೆಲ್ಪ್ಸ್ ಜಯಗಳಿಸಿ 20ನೇ ವೈಯಕ್ತಿಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಜಪಾನ್ ಮಸಾಟೋ ಸಕಾಯ್ ಅವರು ತೀವ್ರ ಪೈಪೋಟಿ ನೀಡಿದರೂ 1 ನಿಮಿಷ 53.36 ಸೆಕೆಂಡುಗಳಲ್ಲಿ ಈಜಿ ಗುರಿಯನ್ನು ಮುಟ್ಟಿದರು. ಹಂಗರಿಯ ತಮಾಸ್ ಕೆಂಡೆರೆಸಿ ಕಂಚಿನ ಪದಕ ವಿಜೇತರಾದರು.
ಫೆಲ್ಪ್ಸ್ 70 ನಿಮಿಷಗಳ ಬಳಿಕ 4x200 ಮೀ ಫ್ರೀಸ್ಟೈಲ್ ರಿಲೇಯಲ್ಲಿ 21ನೇ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಗೆಲುವಿನ ಓಟ ಮುಂದುವರಿಸಿ 7 ನಿಮಿಷ 0.66 ಸೆಕೆಂಡುಗಳಲ್ಲಿ ಗುರಿಮುಟ್ಟಿದರು. ಕಳೆದ ಜೂನ್‌ಗೆ 31 ವರ್ಷ ಪೂರೈಸಿದ ಫೆಲ್ಪ್ಸ್ ಸ್ಪರ್ಧಾತ್ಮಕ ಈಜಿನಲ್ಲಿ ಅತೀ ಹಿರಿಯ ವಯಸ್ಸಿನವರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ