ಭಾರತದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಅಖಿಲ ಭಾರತ ಟೆನ್ನಿಸ್ ಸಂಸ್ಥೆಗೆ ಪತ್ರವೊಂದನ್ನು ಬರೆದಿದ್ದು, ಮುಂಬರುವ ರಿಯೊ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್ ಪೇಸ್ ಬದಲಿಗೆ ಸಾಕೇತ್ ಮೈನೇನಿಯನ್ನು ಡಬಲ್ಸ್ ಜೋಡಿಯಾಗಿ ಆಡಿಸಬೇಕೆಂದು ಮನವಿ ಮಾಡಿರುವ ಆಘಾತಕಾರಿ ಬೆಳವಣಿಗೆ ಸಂಭವಿಸಿದೆ.
ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂಬರ್ 10ರ ಸ್ಥಾನದಲ್ಲಿರುವ ಬೋಪಣ್ಣ ಅತೀ ದೊಡ್ಡ ಕ್ರೀಡಾಕೂಟಕ್ಕೆ ನೇರ ಪ್ರವೇಶವನ್ನು ಪಡೆದಿದ್ದಾರೆ. ವಿಶ್ವದಲ್ಲಿ ಸದ್ಯಕ್ಕೆ 46ನೇ ಕ್ರಮಾಂಕದಲ್ಲಿರುವ ಲಿಯಾಂಡರ್ ಪೇಸ್ ಫ್ರೆಂಚ್ ಓಪನ್‌ನಲ್ಲಿ ಮಾರ್ಟಿನಾ ಹಿಂಗಿಸ್ ಜತೆ ಮಿಶ್ರಿತ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಲೆಜೆಂಡ್ ಪಯಸ್ ಬೋಪಣ್ಣ ಬಳಿಕ ಅತ್ಯಧಿಕ ಕ್ರಮಾಂಕದ ಡಬಲ್ಸ್ ಆಟಗಾರರಾಗಿದ್ದಾರೆ. ಆದರೆ ಹೀಗಿದ್ದರೂ ಕೂಡ ಬೋಪಣ್ಣ 125ನೇ ಕ್ರಮಾಂಕದ ಮೈನೇನಿ ಜತೆ ಜೋಡಿಯಾಗಿ ಆಡಲು ಬಯಸಿರುವುದು ಆಶ್ಚರ್ಯ ಮೂಡಿಸಿದೆ.