ರಿಯೊ ಒಲಿಂಪಿಕ್ಸ್‌ಗೆ ಬ್ರೆಜಿಲ್ ಆತಿಥ್ಯ ನ್ಯಾಯೋಚಿತವೇ?

ಗುರುವಾರ, 21 ಜುಲೈ 2016 (18:29 IST)
ಬಹಳಷ್ಟು ವಿಳಂಬಗಳು, ವಿವಾದಗಳು ಮತ್ತು ರಾಜಕೀಯ ಹೋರಾಟಗಳ ಬಳಿಕ ಬ್ರೆಜಿಲ್ 2014 ಫಿಫಾ ವಿಶ್ವಕಪ್ ಆತಿಥ್ಯ ವಹಿಸಿತು. ಎರಡು ವರ್ಷಗಳ ಬಳಿಕ ದಕ್ಷಿಣ ಅಮೆರಿಕ ರಾಷ್ಟ್ರ  ಆರ್ಥಿಕ ಕುಸಿತದ ಅಂಚಿನಲ್ಲಿದ್ದರೂ ಒಲಿಂಪಿಕ್ಸ್ ಆಯೋಜನೆಗೆ ಸಿದ್ಧತೆ ನಡೆಸಿದೆ.  ಇದಿಷ್ಟೇ ಅಲ್ಲ, ಬ್ರೆಜಿಲ್‌ ಅತೀ ದೊಡ್ಡ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿರುವುದು ನ್ಯಾಯೋಚಿತವಲ್ಲ ಎನ್ನುವುದಕ್ಕೆ ಕೆಳಗಿನ ಐದು ಕಾರಣಗಳಿವೆ.
 
ಅಪರಾಧ ವಿಷಯಗಳು: 15,000 ಅಥ್ಲೀಟ್‌ಗಳ ಸುರಕ್ಷತೆ ಮತ್ತು ಭದ್ರತೆ ಅತೀ ದೊಡ್ಡ ವಿಷಯವಾಗಿದೆ. ಬೀದಿ ಬದಿಯ ದರೋಡೆ ಘಟನೆಗಳು 25 ವರ್ಷಗಳಲ್ಲೇ ಅತೀ ಹೆಚ್ಚಾಗಿದೆ.
 
 ಜೀಕಾ ವೈರಸ್ ಅಪಾಯ: ಜೀಕಾ ವೈರಸ್‌ನಿಂದ ಮಾರಣಾಂತಿಕ ರೋಗ ಹರಡುವ ಭೀತಿಯಿಂದ ಅನೇಕ ಸೂಪರ್‌ಸ್ಟಾರ್‌ಗಳು ಒಲಿಂಪಿಕ್‌ನಲ್ಲಿ ಭಾಗವಹಿಸುತ್ತಿಲ್ಲ. ಅಗ್ರ ಶ್ರೇಯಾಂಕದ ಗಾಲ್ಫರ್‌ಗಳು ಸೇರಿದಂತೆ ಟಾಪ್ ಅಥ್ಲೀಟ್‌ಗಳು ಗೈರಾಗಲಿದ್ದಾರೆ.
 ರಾಜಕೀಯ ಮತ್ತು ಭ್ರಷ್ಟಾಚಾರ: ಸಂಕಷ್ಟದಲ್ಲಿರುವ ಆರ್ಥಿಕತೆ ಮಾತ್ರವೇ ಒಲಿಂಪಿಕ್ ಸಿದ್ಧತೆಗೆ ಅಡ್ಡಿಯಾಗುತ್ತಿಲ್ಲ. ರಾಜಕೀಯ ಅಸ್ಥಿರತೆ ಕೂಡ ದೊಡ್ಡ ಕಾರಣಗಳಲ್ಲಿ ಒಂದಾಗಿದೆ.
 
ಪ್ರಾಜೆಕ್ಟ್ ಮುಗಿಸಲು ವಿಳಂಬ: ರಿಯೊ ಒಲಿಂಪಿಕ್ ಸ್ಟೇಡಿಯಂಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಬಿಲ್ ಪಾವತಿಯಾಗದ ಕಾರಣ ಕಡಿತಗೊಳಿಸಲಾಗಿತ್ತು. ವಿಳಂಬದಿಂದಾಗಿ ಕ್ರೀಡಾಕೂಟದ ಬಜೆಟ್ 7 ಶತಕೋಟಿ ಡಾಲರ್‌ನಿಂದ 13 ಶತಕೋಟಿ ಡಾಲರ್‌ಗೆ ಏರಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ