ಹೆರಿಗೆಗೆ ಮೊದಲೇ ಸಾನಿಯಾ ಮಿರ್ಜಾಗೆ ಗಂಡು ಮಗುವಾಯ್ತೆಂದು ಗುಲ್ಲು!

ಶುಕ್ರವಾರ, 19 ಅಕ್ಟೋಬರ್ 2018 (08:46 IST)
ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದ್ಯದಲ್ಲೇ ಮಗು ಹಡೆಯಲಿದ್ದಾರೆ. ಆದರೆ ಅವರ ಮಗುವಿನ ಬಗ್ಗೆ ಅವರಿಗಿಂತ ಹೆಚ್ಚು ನೆಟ್ಟಿಗರಿಗೇ ಕುತೂಹಲವಿದ್ದಂತಿದೆ.

ಸಾನಿಯಾ ನವಂಬರ್ ಮೊದಲ ವಾರದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ ಅದಕ್ಕೂ ಮೊದಲೇ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಇದೀಗ ಅದಕ್ಕೆ ಸಾನಿಯಾ ಪತಿ ಶೊಯೇಬ್ ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೆಲ್ಲಾ ಕಾರಣವಾಗಿದ್ದು ಸಾನಿಯಾ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ನೋಡಿ ಹಲವರು ಸಾನಿಯಾಗೆ ಗಂಡು ಮಗುವಾಯ್ತೆಂದು ಸುದ್ದಿಹಬ್ಬಿಸಿದರು. ಇದಕ್ಕೀಗ ಶೊಯೇಬ್ ಸ್ಪಷ್ಟನೆ ನೀಡಿದ್ದು, ಇಂಟರ್ನೆಟ್ ನಲ್ಲಿ ನೀವು ನೋಡಿದ್ದೆಲ್ಲಾ ನಿಜವಲ್ಲ. ನಾವು ಸರಿಯಾಗಿ ಅನೌನ್ಸ್ ಮಾಡುವವರೆಗೂ ಮಗು ಹೊರಗೆ ಬರುವವರೆಗೂ ಕಾಯಿರಿ ಎಂದು ಶೊಯೇಬ್ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ