ಆಸ್ಟ್ರೇಲಿಯಾ ಓಪನ್ ಗೆದ್ದ ಸೈನಾ ನೆಹ್ವಾಲ್‌ಗೆ 10 ಲಕ್ಷ ರೂ. ಬಹುಮಾನ

ಗುರುವಾರ, 16 ಜೂನ್ 2016 (15:41 IST)
ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಭಾನುವಾರ  ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿ ಗೆದ್ದ ಸೈನಾ ನೆಹ್ವಾಲ್ ಅವರಿಗೆ 10 ಲಕ್ಷ ರೂ. ಬಹುಮಾನವನ್ನು ಪ್ರಕಟಿಸಿದೆ.

ವಿಶ್ವ ನಂಬರ್ 8ರ ಸ್ಥಾನದಲ್ಲಿರುವ ಸೈನಾ ಸುನ್ ಯು ಅವರನ್ನು 11-21, 21-14 ಮತ್ತು 21-19ರಿಂದ ರೋಚಕ ಫೈನಲ್ ಪಂದ್ಯದಲ್ಲಿ ಜಯಗಳಿಸಿ ಟ್ರೋಫಿಯನ್ನು ಗೆದ್ದಿದ್ದರು. 
 
 ಸೈನಾ ಅವರ ಅದ್ಭುತ ಜಯಕ್ಕೆ ಅಭಿನಂದಿಸುತ್ತೇನೆ. ಇದು ಅವರ ವೃತ್ತಿಜೀವನದಲ್ಲಿ ಇನ್ನೊಂದು ಮೈಲಿಗಲ್ಲು.  ಇದು 2016ರ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅವರಿಗೆ ಪ್ರೇರೇಪಣೆ ನೀಡುತ್ತದೆ. ಅಏವರ ಕೋಚ್ ವಿಮಲ್ ಕುಮಾರ್ ಮತ್ತು ಬೆಂಬಲ ಸಿಬ್ಬಂದಿ ಸೈನಾರಿಂದ ಉತ್ತಮ ಫಲಿತಾಂಶ ತೆಗೆದಿದ್ದಕ್ಕಾಗಿ ಅಭಿನಂದಿಸುತ್ತೇನೆ ಎಂದು ಬಿಎಐ ಅಧ್ಯಕ್ಷ ಅಖಿಲೇಷ್ ದಾಸ್ ಗುಪ್ತಾ ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ