ಶ್ರದ್ಧಾ ಕಪೂರ್`ಗೆ ಸೈನಾ ನೆಹ್ವಾಲ್ ತರಬೇತಿ

ಶುಕ್ರವಾರ, 8 ಸೆಪ್ಟಂಬರ್ 2017 (16:49 IST)
ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆಯುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್, ಹಸೀನಾ ಪಾರ್ಕರ್ ಬಯೋಪಿಕ್ ಬಿಡುಗಡೆಗಾಗಿ ಕಾಯುತ್ತಿದ್ದು, ಅದಾಗಲೇ ಮತ್ತೊಂದು ಬಯೋಪಿಕ್ ಸಿನಿಮಾದ ತಯಾರಿಯಲ್ಲಿ ತೊಡಗಿದ್ದಾರೆ.

ಸದ್ಯ, ಸೈನಾ ನೆಹ್ವಾಲ್ ಬಯೋಪಿಕ್`ಗೆ ಪಾತ್ರದ ತಯಾರಿಯಲ್ಲಿ ಶ್ರದ್ಧಾ ಕಪೂರ್ ತೊಡಗಿದ್ದಾರೆ, ಇದಕ್ಕಾಗಿ ರೀಲ್ ಮತ್ತು ರಿಯಲ್ ಸೈನಾ ಇಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ, ಹೌದು, ಸೈನಾ ಬಯೋಪಿಕ್`ಗೆ ತಯಾರಿಯಲ್ಲಿರುವ ಶ್ರದ್ಧಾ, ಸೈನಾ ನೆಹ್ವಾಲ್ ಬಳಿಯೆ ಟ್ರೇನಿಂಗ್ ಪಡೆಯುತ್ತಿದ್ದಾರೆ. ಅವರ ಆವಭಾವ ಬ್ಯಾಡ್ಮಿಂಟನ್ ಆಡುವ ರೀತಿ ಚಟುವಟಿಕೆಗಳ ಬಗ್ಗೆ ಅವರ ಬಳಿಯೇ ಕೋಚಿಂಗ್ ಪಡೆಯುತ್ತಿದ್ದಾರೆ.

 ಶ್ರದ್ಧಾ ಜೊತೆ ಇರುವ ಫೋಟೋಗಳನ್ನ ಸೈನಾ ನೆಹ್ವಾಲ್ ಇನ್`ಸ್ಟಾಗ್ರಾಮ್`ನಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ರದ್ಧಾ ಕಪೂರ್ ಜೊತೆ ಇವತ್ತಿನ ಬ್ಯಾಡ್ಮಿಂಟನ್ ಅಭ್ಯಾಸ ಎಂದು ಅಡಿ ಬರಹ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ