ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ದೊರೆತಿದೆ. ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಸೋಲನುಭವಿಸಿದರೆ, ಪಿ.ವಿ.ಸಿಂಧು ಸೆಮಿಫೈನಲ್ನಲ್ಲಿ ಜಯಗಳಿಸಿ ಫೈನಲ್ ಪ್ರವೇಶಿಸಿದ್ದಾರೆ.
ನಾಲ್ಕನೇ ಶ್ರೇಯಾಂಕಿತ ಸಿಂಧು ಚೀನಾದ ಒಂಬತ್ತನೇ ಶ್ರೇಯಾಂಕಿತೆ ಚೆನ್ ಯುಫೈ ಅವರನ್ನು 21-13, 21-10 ಸೆಟ್ಗಳಿಂದ 48 ನಿಮಿಷಗಳಲ್ಲಿ ಸೋಲಿಸಿದರು. ಫೈನಲ್ ಪಂದ್ಯದಲ್ಲಿ ಜಪಾನಿನ ಏಳನೇ ಶ್ರೇಯಾಂಕಿತೆ ನೊಝೊಮಿ ಒಕುಹರ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
ಆಕ್ರಮಣಶೀಲವಾಗಿ ಆಡಿದ ಸಿಂಧು, 19 ವರ್ಷದ ಯುಫೀಯನ್ನು ಉತ್ತಮ ಹೊಡೆತಗಳಿಂದ ಕಂಗೆಟ್ಟಿಸಿ ಜಯಗಳಿಸಿ ಫೈನಲ್ ಹಂತವನ್ನು ಪ್ರವೇಶಿಸಿದರು.
ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ 2012 ರ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ, ಒಕುಹರಾ ವಿರುದ್ಧ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.