ಹುಟ್ಟಲಿರುವ ತಮ್ಮ ಮೊದಲ ಮಗುವಿಗೆ ಆಗಲೇ ಹೆಸರಿಟ್ಟಿದ್ದಾರಂತೆ ಸಾನಿಯಾ ಮಿರ್ಜಾ
ಹುಟ್ಟಲಿರುವುದು ಹೆಣ್ಣೋ, ಗಂಡು ಮಗುವೋ ಗೊತ್ತಿಲ್ಲ. ಆದರೆ ಈಗಾಗಲೇ ಸಾನಿಯಾ-ಶೊಯೇಬ್ ತಮ್ಮ ಮಗುವಿಗೆ ಏನೆಂದು ಹೆಸರಿಡಬೇಕೆಂದು ನಿರ್ಧರಿಸಿದ್ದಾರಂತೆ. ಹಾಗಂತ ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ ಪ್ರಶ್ನೆಗೆ ಸಾನಿಯಾ ಉತ್ತರಿಸಿದ್ದಾರೆ.
ಆದರೆ ನಿಮ್ಮ ಮಗುವಿಗೆ ಏನೆಂದು ಹೆಸರಿಡುತ್ತೀರಿ ಎಂದಿದ್ದಕ್ಕೆ ಅದು ಸೀಕ್ರೆಟ್ ಎಂದು ನಕ್ಕಿದ್ದಾರೆ ಸಾನಿಯಾ. ಈ ಮೂಲಕ ತಾವು ನಿರ್ಧರಿಸಿರುವ ಹೆಸರೇನೆಂದು ಬಹಿರಂಗಪಡಿಸಿಲ್ಲ. ಅಷ್ಟೇ ಅಲ್ಲ ತಮ್ಮ ತಾಯ್ತನವನ್ನು ಸಂಭ್ರಮಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.