ಕೊನೆಗೂ ಮಗುವಿನ ಬಗ್ಗೆ ಮನಸ್ಸು ಮಾಡಿದರು ಸಾನಿಯಾ ಮಿರ್ಜಾ!
ಗೋವಾ ಫೆಸ್ಟ್ 2018 ರಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾನಿಯಾ ‘ನಾನು ಇವತ್ತು ಒಂದು ರಹಸ್ಯ ಹೇಳಲು ಬಯಸುತ್ತೇನೆ. ನಾನು ಪತಿ ಶೊಯೇಬ್ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದೇವೆ. ನಮಗೆ ಇಬ್ಬರಿಗೂ ಮಗುವಾಗುವಾಗ ಆ ಮಗುವಿಗೆ ಮಿರ್ಜಾ ಮತ್ತು ಮಲಿಕ್ ಎಂಬ ಎರಡೂ ಸರ್ ನೇಮ್ ಇಡುತ್ತೇವೆ. ಆ ಮೂಲಕ ಎರಡೂ ಕುಟುಂಬದ ಹೆಸರು ಉಳಿಸಲು ಬಯಸುತ್ತೇವೆ. ನನ್ನ ಗಂಡ ಶೊಯೇಬ್ ಗಂತೂ ಹೆಣ್ಣು ಮಗು ಬೇಕೆಂದು ತುಂಬಾ ಆಸೆಯಿದೆ’ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.
ಆ ಮೂಲಕ ಒಬ್ಬ ಮಗ ಮಾತ್ರ ಕುಟುಂಬದ ಹೆಸರನ್ನು ಮುಂದೆ ತೆಗೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆಯನ್ನು ಸುಳ್ಳು ಮಾಡಲು ಹೊರಟಿದ್ದಾರಂತೆ ಮಿರ್ಜಾ. ಆದಷ್ಟು ಬೇಗ ಇವರ ಮನದಾಸೆ ಪೂರೈಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.