ನವದೆಹಲಿ: ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ ನಂಬರ್ ಒನ್ ಪಟ್ಟಕ್ಕೆ ಏರಿದ ಪ್ರಯಾಣವನ್ನು ಆತ್ಮಕಥನದಲ್ಲಿ ಬರೆದಿದ್ದು, ಇದು ಜುಲೈನಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಕಾಶಕ ಹಾರ್ಪರ್ ಕಾಲಿನ್ಸ್ ತಿಳಿಸಿದ್ದಾರೆ.
'' ಏಸ್ ಏಗೇನ್ಸ್ಟ್ ಆಡ್ಸ್'' ಶಿರೋನಾಮೆಯ ಪುಸ್ತಕವನ್ನು ಸಾನಿಯಾ ತನ್ನ ತಂದೆ ಇಮ್ರಾನ್ ಮಿರ್ಜಾ ನೆರವಿನೊಂದಿಗೆ ಸ್ವತಃ ಬರೆದಿದ್ದಾರೆ. ಸಾನಿಯಾರದ್ದು ಅಸಾಮಾನ್ಯ ಸಾಧನೆಯಾಗಿದ್ದು, ಅವರ ಆತ್ಮಕಥನವು ಸ್ಫೂರ್ತಿದಾಯಕವಾಗಿದೆ ಎಂದು ಕಾಲಿನ್ಸ್ ತಿಳಿಸಿದರು.
ಈ ಪುಸ್ತಕದಲ್ಲಿ ಸಾನಿಯಾ ಕೋರ್ಟ್ ಹೊರಗೆ ಮತ್ತು ಒಳಗೆ ಕೆಲವು ಸ್ಮರಣೀಯ ಪ್ರಸಂಗಗಳನ್ನು ಬರೆದಿದ್ದು, ವೈಯಕ್ತಿಕವಾಗಿ ಮತ್ತು ಕ್ರೀಡಾಪಟುವಾಗಿ ತಮ್ಮ ಬೆಳವಣಿಗೆಗೆ ನೆರವು ನೀಡಿದ ಜನರನ್ನು ಮತ್ತು ಸಂಬಂಧಗಳನ್ನು ಅವರು ಸ್ಮರಿಸಿಕೊಂಡಿದ್ದಾರೆ. ಪಾಕಿಸ್ತಾನದ ಕ್ರಿಕೆಟರ್ ಶೋಯಬ್ ಮಲ್ಲಿಕ್ ಅವರನ್ನು ಮದುವೆಯಾಗಿರುವ ಟೆನ್ನಿಸ್ ತಾರೆ, ದೇಶದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಮತ್ತು ಅತೀ ಗಣ್ಯ ಅಥ್ಲೇಟ್‌ಗಳ ಪೈಕಿ ಒಬ್ಬರಾಗಿದ್ದಾರೆ.