ಬಾಕ್ಸಿಂಗ್ ಫೈನಲ್‌ನಲ್ಲಿ ಸೋನಿಯಾ ಲಾಥರ್‌ಗೆ ಸೋಲು, ಬೆಳ್ಳಿಗೆ ತೃಪ್ತಿ

ಶನಿವಾರ, 28 ಮೇ 2016 (17:18 IST)
ಭಾರತದ ಮಹಿಳಾ ಬಾಕ್ಸರ್ ಸೋನಿಯಾ ಲಾಥರ್ (57 ಕೆಜಿ) ಎಐಬಿಎ ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಟಾಪ್ ಸೀಡ್ ಇಟಲಿಯ ಅಲೆಸಿಯಾ ಮೆಸಿಯಾನೊಗೆ ಸೋತು ಬೆಳ್ಳಿಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಸೋನಿಯಾ 1-2ರಿಂದ ಫೈನಲ್ಸ್‌ನಲ್ಲಿ ಸೋತರೂ ಬೆಳ್ಳಿ ಪದಕ ಗೆದ್ದ ಏಕೈಕ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಭಾರತ ಸಂಪೂರ್ಣ ನಿರಾಶಾದಾಯಕ ಪ್ರದರ್ಶನದ ನಂತರ ಬರಿಗೈಲಿ ವಾಪಸು ಬರಲಿಲ್ಲ ಎನ್ನುವುದೇ ಸಮಾಧಾನದ ವಿಷಯವಾಗಿದೆ. 
 
 24 ವರ್ಷದ ಹರ್ಯಾಣದ ಬಾಕ್ಸರ್ ಎದುರಾಳಿ ಮೆಸಿಯಾನೊ ಅವರನ್ನು ಆರಂಭದ ಸುತ್ತಿನಲ್ಲಿ ನಿಖರ ಪಂಚ್‌ಗಳ ಮೂಲಕ ಮೇಲುಗೈ ಸಾಧಿಸಿದ್ದರು. ಆದಾಗ್ಯೂ, ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕ ವಿಜೇತೆಯಾಗಿದ್ದ ಇಟಲಿ ಆಟಗಾರ್ತಿ ಮುಂದಿನ ಮೂರು ಸುತ್ತುಗಳಲ್ಲಿ ಪ್ರತಿದಾಳಿ ನಡೆಸಿದರು. ಮೆಸಿಯಾನೊ ಸಮೀಪದಿಂದ ದಾಳಿ  ಮಾಡಲಾರಂಭಿಸಿದಾಗ ಸೋನಿಯಾಗೆ ಪಂಚ್ ಮಾಡುವುದು ಕಷ್ಟವಾಗಿ ಸೋಲಪ್ಪಿದರು. 
 
 2010ರಲ್ಲಿ 48 ಕೆಜಿ ವಿಭಾಗದಲ್ಲಿ ಐದನೇ ವಿಶ್ವ ಪ್ರಶಸ್ತಿ ಗೆದಿದ್ದ ಮೇರಿ ಕಾಮ್ ಈ ಬಾರಿ ಎರಡನೇ ಸುತ್ತು ಮಾತ್ರ ಪ್ರವೇಶಿಸಲು ಸಾಧ್ಯವಾಗಿ ರಿಯೊ ಒಲಿಂಪಿಕ್ಸ್‌ನಿಂದ ವಂಚಿತರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ