ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದ ಸುರೇಶ್ ಕಲ್ಮಾಡಿ ಈಗ ಒಲಿಂಪಿಕ್ಸ್ ಸಮಿತಿಗೆ ಅಜೀವ ಸದಸ್ಯ!

ಬುಧವಾರ, 28 ಡಿಸೆಂಬರ್ 2016 (07:14 IST)
ನವದೆಹಲಿ: ಭಾರತದಲ್ಲಿ ಏನು ಬೇಕಾದರೂ ನಡೆಯುತ್ತದೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ. ಭ್ರಷ್ಟಾಚಾರ ಮಾಡಿ ಸಿಕ್ಕಿ ಬಿದ್ದಿದ್ದ ಸುರೇಶ್ ಕಲ್ಮಾಡಿ ಇದೀಗ ಭಾರತೀಯ ಒಲಿಂಪಿಕ್ಸ್ ಸಮಿತಿಯ ಅಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ.


2010 ರ ಕಾಮನ್ ವೆಲ್ತ್ ಗೇಮ್ಸ್ ನವದೆಹಲಿಯಲ್ಲಿ ನಡೆದಿದ್ದಾಗ ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ ಕಾಮನ್ ವೆಲ್ತ್ ಗೇಮ್ಸ್ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅವರು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿ ವಿಚಾರಣೆ ಎದುರಿಸುತ್ತಿದ್ದರು.

ಇವರಷ್ಟೇ ಅಲ್ಲ, ಇನ್ನೊಬ್ಬ ಭ್ರಷ್ಟ ಅಧಿಕಾರಿ ಅಭಯ್ ಚೌಟಾಲಾ ಕೂಡಾ ಈ ಪ್ರತಿಷ್ಠಿತ ಸದಸ್ಯತ್ವ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕ್ರೀಡಾ ಸಚಿವ ವಿಜಯ್ ಗೊಯೆಲ್ ರನ್ನು ಕೇಳಿದಾಗ ನನಗೆ ಇದು ಗೊತ್ತಿರಲಿಲ್ಲ. ಶೀಘ್ರದಲ್ಲೇ ಈ ಬಗ್ಗೆ ವಿಚಾರಿಸುತ್ತೇನೆ ಎಂದಿದ್ದಾರೆ.  ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಭಾರತ ಹಾಕಿ ತಂಡದ ಮಾಜಿ ನಾಯಕ ‘ಕ್ರೀಡಾ ಒಕ್ಕೂಟಗಳಿಗೆ ಕ್ರೀಡಾಳುಗಳನ್ನೇ ಆಯ್ಕೆ ಮಾಡದ ಹೊರತು ಇಂತಹ ಪ್ರಮಾದಗಳು ನಡೆಯುತ್ತಲೇ ಇರುತ್ತವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ