ಒಲಿಂಪಿಕ್ಸ್ ಗೆ ಬರುವವರಿಗೆ ಜಪಾನ್ ಮಾಡಿರುವ ಕಠಿಣ ಕೊರೋನಾ ನಿಯಮ

ಸೋಮವಾರ, 19 ಜುಲೈ 2021 (12:52 IST)
ಟೋಕಿಯೋ: ಟೋಕಿಯೋದಲ್ಲಿ ನಡೆಯಲ್ಲಿರುವ ಒಲಿಂಪಿಕ್ಸ್  ಕ್ರೀಡಾಕೂಟಕ್ಕೆ ವಿಶ್ವದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಬರುತ್ತಾರೆ. ಹೀಗಾಗಿ ಕೊರೋನಾ ಹರಡದಂತೆ ತಡೆಯಲು ಜಪಾನ್ ಕಠಿಣ ನಿಯಮಾವಳಿಗಳನ್ನು ರೂಪಿಸಿದೆ.


ಜಪಾನ್ ಗೆ ಬರುವ ಮೊದಲು ಆಟಗಾರರು ಕಡ್ಡಾಯವಾಗಿ 96 ಗಂಟೆಯೊಳಗಿನ ಅವಧಿಯಲ್ಲಿ ಎರಡು ಬಾರಿ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಹೊಂದಿರಬೇಕು. ಜಪಾನ್ ಗೆ ಬಂದಿಳಿದ ಕೂಡಲೇ ವಿಮಾನ ನಿಲ್ದಾಣದಲ್ಲಿ ಮತ್ತೆ ಆಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದ್ದು, ಪಾಸಿಟಿವ್ ವರದಿ ಬಂದರೆ ಅವರನ್ನು ಪ್ರತ್ಯೇಕವಾಗಿ ಕರೆದೊಯ್ಯಲಾಗುವುದು.

ಒಲಿಂಪಿಕ್ ಗ್ರಾಮದೊಳಗೆ ಎಂಟ್ರಿ ಪಡೆಯುವ 72 ಗಂಟೆಯೊಳಗೆ ಮತ್ತೆ ಕೊರೋನಾ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಪಡೆಯಬೇಕು. ಹೆಚ್ಚು ಪ್ರಕರಣಗಳಿರುವ ದೇಶಗಳಿಂದ ಬರುವ ಕ್ರೀಡಾಪಟುಗಳನ್ನು ಕಠಿಣ ನಿಯಮಾವಳಿಗಳೊಂದಿಗೆ ಪ್ರತ್ಯೇಕವಾಗಿರಿಸಲಾಗುತ್ತದೆ. ಟೋಕಿಯೋಗೆ ಬಂದಿಳಿಯುವ ಕ್ರೀಡಾಪಟುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಹೆಚ್ಚು ರಿಸ್ಕ್ ಇರುವವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ.ಇದಲ್ಲದೆ ಕೊರೋನಾ ಲಸಿಕೆ ಪಡೆದುಕೊಂಡಿದ್ದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ