ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಆರ್ಚರಿಯಲ್ಲಿ ಗೆಲುವು, ಟೇಬಲ್ ಟೆನಿಸ್ ನಲ್ಲಿ ಸೋಲು

ಶನಿವಾರ, 24 ಜುಲೈ 2021 (09:30 IST)
ಟೋಕಿಯೋ: ಭಾರತಕ್ಕೆ ಇಂದು ಆರ್ಚರಿ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಗೆಲುವು ಸಿಕ್ಕಿದ್ದರೆ, ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮಣಿಕ್ ಬಾತ್ರಾ ಜೋಡಿ ಸೋಲುಂಡಿದೆ.

 

ಮಿಕ್ಸೆಡ್ ಡಬಲ್ಸ್ ಆರ್ಚರಿ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಜೋಡಿ ಚೈನೀಸ್ ತೈಪೆ ಜೋಡಿ ವಿರುದ್ಧ 5-3 ಅಂತರದ ಗೆಲುವು ಕಂಡಿದ್ದು, ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದೆ.

ಇನ್ನೊಂದೆಡೆ ಟೇಬಲ್ ಟೆನಿಸ್ ನಲ್ಲಿ ಮಣಿಕ್ ಬಾತ್ರಾ-ಎಸ್. ಅಚಂತಾ ಜೋಡಿ ಚೈನೀಸ್ ತೈಪೆ ಜೋಡಿ ವಿರುದ್ಧ 16 ನೇ ಸುತ್ತಿನ ಪಂದ್ಯದಲ್ಲಿ 4-0 ಅಂತರದಿಂದ ಸೋಲು ಅನುಭವಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ