ಅಮೇರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಶುಭಾರಂಭ ಮಾಡಿದ್ದಾರೆ.
ಮಹಿಳೆಯರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಭಾರತದ ಸಾನಿಯಾ ಮತ್ತು ಜೆಕ್ ಗಣರಾಜ್ಯದ ಬಾರ್ಬಕಾ ಸ್ಟ್ರೈಕೋವಾ 6-3, 6-2ರ ನೇರ ಸೆಟ್ಗಳಿಂದ ಅಮೇರಿಕದ ಜಡಾ ಮೈಯಿ ಹಾರ್ತ್ ಮತ್ತು ಎನಾ ಶಿಬಹರಾ ವಿರುದ್ಧ ಜಯ ಸಾಧಿಸಿದರು.
ಹಾಲಿ ಮಿಶ್ರ ಡಬಲ್ಸ್ ಚಾಂಪಿಯನ್ ಪೇಸ್ ಮತ್ತು ಸ್ವಿಟ್ಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ 6-3, 6-2ರ ನೇರ್ ಸೆಟ್ಗಳಿಂದ ಅಮೇರಿಕದ ಸಚಿಯಾ ವಿಕೆರಿ ಮತ್ತು ಫ್ರಾನ್ಸಿನ ತಿಯಾಪೊಯೆ ಅವರನ್ನು ಸೋಲಿಸಿ ಮುಂದಿನ ಹಂತಕ್ಕೆ ತಲುಪಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಮತ್ತು ಡೆನ್ಮಾರ್ಕ್ನ ಫೆಡೆರಿಕ್ ನೀಲ್ಸನ್, ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಮತ್ತು ಸರ್ಬಿಯಾದ ನೆನೆದಾ ಜಿಮೊಂಜಿಚ್ ಅವರನ್ನು6-3, 6-7 ಮತ್ತು 6-3 ರಿಂದ ಮಣ್ಣು ಮುಕ್ಕಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ